Rambapuri Shri: ‘ಜಾತಿ ಗಣತಿ ವರದಿ ‘ ಜಾರಿಯಾದ್ರೆ ಸರ್ಕಾರ ಪತನ – ರಂಭಾಪುರಿ ಶ್ರೀಗಳಿಂದ ಅಚ್ಚರಿ ಭವಿಷ್ಯ!!

Share the Article

Ramba Puri Shri: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಲ್ಲಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2015ರ (ಜಾತಿ ಗಣತಿ) ದತ್ತಾಂಶಗಳ ಅಧ್ಯಯನ ವರದಿಯು ರಾಜ್ಯದಲ್ಲಿ ಹೊಸ ರೀತಿ ಕಿಚ್ಚನ್ನು ಹಬ್ಬಿಸಿದೆ. ಪ್ರಬಲ ಸಮುದಾಯಗಳು ಈ ಜಾತಿಗಣತಿ ವರದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ. ಈ ಬೆನ್ನಲ್ಲೇ ರಂಭಾಪುರಿ ಮಠದ ಶ್ರೀಗಳು ಸರ್ಕಾರದ ಕುರಿತು ಅಚ್ಚರಿ ಭವಿಷ್ಯ ನುಡಿದಿದ್ದಾರೆ.

ಹೌದು,ರಾಜ್ಯದಲ್ಲಿ ಜಾತಿಗಣತಿ ವರದಿ ಜಾರಿಯಾದ್ರೆ ಸರ್ಕಾರ ಪತನವಾಗಲಿದೆ ಎಂದು ಹಾವೇರಿಯಲ್ಲಿ ರಂಭಾಪುರಿ ಶ್ರೀಗಳು ಭವಿಷ್ಯ ನುಡಿದಿದ್ದಾರೆ. ಈ ಕುರಿತಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜಾತಿ ಗಣತಿ ಜಾರಿಯಾದ್ರೆ ಸರ್ಕಾರ ಪತನವಾಗುತ್ತೆ ಅಂತ ಕಾಂಗ್ರೆಸ್ ನಾಯಕರೇ ಹೇಳ್ತಾರೆ. ಹೀಗಾಗಿ ಜಾತಿಗಣವತಿ ವರದಿ ಪಾರದರ್ಶವಕಾಗಿ ಆಗಿಲ್ಲ ಎಂದು ಎಲ್ಲರಿಗೂ ಗೊತ್ತಿದೆ. ಹೀಗಾಗಿ ಜಾತಿಗಣತಿ ವರದಿ ಜಾರಿಯಾಗಬಾರದು ಎಂದು ಹೇಳಿದ್ದಾರೆ.

Comments are closed.