Haveri: ಸಾಲದ ವಿಷಯಕ್ಕೆ ಹಲ್ಲೆ, ಗ್ಯಾಂಗ್‌ರೇಪ್ ಕಥೆ ಕಟ್ಟಿದ ಮಹಿಳೆ ಅಂದರ್!

Haveri: ತನ್ನ ಮೇಲೆ ಗ್ಯಾಂಗ್ ರೇಪ್ ಆಗಿದೆ ಎಂದು ಕಥೆ ಕಟ್ಟಿ ಆರೋಪ ಮಾಡಿದ ಮಹಿಳೆಯ ಕುರಿತು ತನಿಖೆ ವೇಳೆ ಸತ್ಯ ಬಯಲಾಗಿದೆ. ಸಾಲದ ವಿಚಾರದ ಗಲಾಟೆಯಲ್ಲಿ ಡೈವರ್ಟ್ ಮಾಡೋಕೆ ಮಹಿಳೆ ಈ ರೀತಿಯ ಹೈಡ್ರಾಮ ಸೃಷ್ಟಿ ಮಾಡಿರುವುದು ತನಿಖೆ ಸಮಯದಲ್ಲಿ ತಿಳಿದು ಬಂದಿದೆ.
ಘೀರಾಂಬಿ ಎನ್ನುವ ಮಹಿಳೆ ಅತ್ಯಾಚಾರದ ಕಥೆ ಕಟ್ಟಿರುವುದು ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ.
ತನ್ನ ಮೇಲೆ ಐದು ಜನರಿಂದ ಗ್ಯಾಂಗ್ ರೇಪ್ ನಡೆದಿರುವುದಾಗಿ ಸುಳ್ಳು ಕಥೆ ಸೃಷ್ಟಿ ಮಾಡಿದ್ದಳು ಮಹಿಳೆ. ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಯಾವುದೇ ರೇಪ್ ನಡೆದಿಲ್ಲ ಅನ್ನೋದು ಬೆಳಕಿಗೆ ಬಂದಿದೆ. ಇದರಿಂದ ಆತಂಕಗೊಂಡ ಘೀರಾಂಬಿ ಪೊಲೀಸರ ಬಳಿ ತನ್ನ ಮೇಲೆ ಅತ್ಯಾಚಾರ ನಡೆದಿಲ್ಲ, ಇಬ್ಬರು ಮಹಿಳೆಯರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ.
Comments are closed.