Train ATM: ಇನ್ಮುಂದೆ ರೈಲಲ್ಲೂ ಹಣ ಡ್ರಾ ಮಾಡಬಹುದು – ರೈಲಿಗೂ ಬಂತು ATM

Share the Article

Train ATM: ಭಾರತೀಯ ರೈಲ್ವೆ ತನ್ನ ಪ್ರಯಾಣಿಕರಿಗಾಗಿ ಅನೇಕ ಹೊಸ ಹೊಸ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಅಂತೀಯ ಇದೀಗ ಭಾರತೀಯ ರೈಲ್ವೆಯು ಹೊಸ ಪ್ರಯೋಗವನ್ನು ಮಾಡಿದ್ದು, ಇನ್ಮುಂದೆ ಪ್ರಯಾಣಿಕರು ರೈಲಿನಲ್ಲೂ ಕೂಡ ಹಣವನ್ನು ಡ್ರಾ ಮಾಡಬಹುದು. ಯಾಕೆಂದರೆ ಇನ್ನು ಮುಂದೆ ರೈಲಿಗೂ ಎಟಿಎಂ ಲಗ್ಗೆ ಇಡಲಿದೆ.

ಹೌದು, ಜನರಿಗೆ ಅನುಕೂಲ ಮಾಡಿ ಕೊಡುವ ನಿಟ್ಟಿನಲ್ಲಿ ಭಾರತೀಯ ರೈಲ್ವೆಯು ಇದೀಗ ಒಂದು ಹೆಜ್ಜೆ ಮುಂದೆ ಹೋಗಿದ್ದು, ಇದೇ ಮೊದಲ ಬಾರಿಗೆ ರೈಲಿನಲ್ಲಿ ATM ಅಳವಡಿಸಿಕೊಂಡಿದೆ. ನಾಸಿಕ್‌ನ ಮನ್ಮಾಡ್‌ನಿಂದ ಮುಂಬಯಿಗೆ ಸಂಚರಿಸುವ ಪಂಚವಟಿ ಎಕ್ಸ್‌ಪ್ರೆಸ್‌ನ AC ಕೋಚ್‌ನಲ್ಲಿ ATM ಇರಿಸಲಾಗಿದ್ದು, ಭಾರತೀಯ ರೈಲ್ವೆಯ ಹೊಸ ಪ್ರಯೋಗವು ಯಶಸ್ವಿಯಾಗಿದೆ. ಇದರಿಂದ ಪ್ರಯಾಣಿಕರು ರೈಲಿನಲ್ಲಿರುವ ATM ಬಳಸಿಕೊಂಡ ಹಣವನ್ನು ಡ್ರಾ ಮಾಡಬಹುದಾಗಿದೆ.

ಕೇಂದ್ರ ರೈಲ್ವೆಯ ಮುಂಬೈ ಪ್ರಧಾನ ಕಚೇರಿಯು ಭುಸವಾಲ್‌ ವಿಭಾಗ ಮತ್ತು ಬ್ಯಾಂಕ್‌ ಆಫ್‌ ಮಹಾರಾಷ್ಟ್ರದ ಸಂಯೋಜನೆಯಲ್ಲಿ ಎಟಿಎಂ ಅನ್ನು ಸ್ಥಾಪಿಸಿದೆ. ‘ಈ ಪ್ರಯೋಗ ಯಶಸ್ವಿಯಾದರೆ ಹೆಚ್ಚಿನ ರೈಲುಗಳಲ್ಲಿ ಎಂಟಿಎಂ ಯಂತ್ರವನ್ನು ಸ್ಥಾಪಿಸಲಾಗುವುದು. 172 ವರ್ಷಗಳ ಹಿಂದೆ 1853ರಲ್ಲಿ 34 ಕಿ.ಮೀ ನಡುವೆ ಆರಂಭವಾದ ರೈಲು ಸಂಚಾರ ಇಂದು ಜಗತ್ತಿನ ಅತಿ ದೊಡ್ಡ ರೈಲು ಸಂಪರ್ಕ ಜಾಲವಾಗಿ ಬೆಳೆದಿದೆ. ಇದೇ ಹೆಮ್ಮೆಯೊಂದಿಗೆ ಭಾರತೀಯ ರೈಲ್ವೆ ಮುಂದೆ ಸಾಗಲಿದೆ’ ಎಂದು ಭಾರತೀಯ ರೈಲ್ವೆ ಹೇಳಿದೆ.

Comments are closed.