Delhi University: ‘ತುಂಬಾ ಸೆಕೆ’ ಎಂದ ವಿದ್ಯಾರ್ಥಿಗಳು – ಕ್ಲಾಸ್ ರೂಮ್ ಗೋಡೆಗೆ ಸಗಣಿ ತಂದು ಬಳಿದ ಪ್ರಿನ್ಸಿಪಲ್!!

Share the Article

Delhi University : ಕ್ಲಾಸ್ ಅಲ್ಲಿ ಕೂರಕ್ಕೆ ಆಗುತ್ತಿಲ್ಲ, ತುಂಬಾ ಸೆಕೆ ಆಗುತ್ತಿದೆ ಎಂದು ವಿದ್ಯಾರ್ಥಿಗಳು ಪ್ರಿನ್ಸಿಪಾಲ್ ಬಳಿ ಮೊರೆ ಇಟ್ಟಿದ್ದಾರೆ. ಹೀಗಾಗಿ ಕಾಲೇಜಿನ ಪ್ರಿನ್ಸಿಪಲ್ ತನಗೆ ಹೊಳೆದ ಉಪಾಯವನ್ನು ಇಂಪ್ಲಿಮೆಂಟ್ ಮಾಡಿದ್ದು, ಸಗಣಿಯನ್ನು ತಂದು ಕ್ಲಾಸ್ ರೂಮ್ ಗೋಡೆಗಳಿಗೆ ಬಳಿದಿದ್ದಾರೆ. ಇಂತಹ ವಿಚಿತ್ರ ಪ್ರಕರಣ ಒಂದು ದೆಹಲಿ ವಿಶ್ವವಿದ್ಯಾನಿಲಯದಲ್ಲಿ ನಡೆದಿದೆ.

ಹೌದು, ದೆಹಲಿ ವಿಶ್ವವಿದ್ಯಾಲಯದ ಲಕ್ಷ್ಮಿಬಾಯಿ ಕಾಲೇಜಿನ ಪ್ರಾಂಶುಪಾಲರು ತರಗತಿಯ ಗೋಡೆಗಳಿಗೆ ಹಸುವಿನ ಸಗಣಿ ಹಚ್ಚುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸರಣಿ ವಿಡಿಯೋಗಳಲ್ಲಿ ಸೆರೆಹಿಡಿಯಲಾದ ದೃಶ್ಯವನ್ನು ಸ್ವತಃ ಪ್ರಾಂಶುಪಾಲರೇ ಕಾಲೇಜಿನ ಅಧ್ಯಾಪಕರಿಗಾಗಿ ರಚಿಸಿದ ವಾಟ್ಸ್​ಆಯಪ್​ ಗ್ರೂಪ್​ನಲ್ಲಿ ಹಂಚಿಕೊಂಡಿದ್ದಾರೆ.

ಇನ್ನು ಈ ಬೆನ್ನಲ್ಲೇ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆ ‘ಸಗಣಿ ಲೇಪಿಸುವುದರಿಂದ ತಂಪಾಗಿರುತ್ತದೆ ಎನ್ನುವುದಾದರೆ, ನಿಮ್ಮ ಕಚೇರಿಗೆ ಎ.ಸಿ. ಏಕೆ ಬೇಕು? ಸಗಣಿಯನ್ನೇ ಬಳಿಯುತ್ತೇವೆ’ ಎಂದು ಪ್ರಾಂಶುಪಾಲರ ಕಚೇರಿಯ ಗೋಡೆಗೆ ಹಸುವಿನ ಸಗಣಿ ಅಂಟಿಸಿದಂತಹ ವಿಚಿತ್ರ ಪ್ರಕರಣ ಕೂಡ ಬೆಳಕಿಗೆ ಬಂದಿದೆ.

Comments are closed.