Daughters Fiance: ಭಾವಿ ಅಳಿಯನೊಂದಿಗೆ ಓಡಿ ಹೋಗಿದ್ದ ಯುಪಿ ಮಹಿಳೆ ಪೊಲೀಸರಿಗೆ ಶರಣು;

ಓಡಿ ಹೋಗಲು ಕಾರಣವೇನೆಂದು ತಿಳಿಸಿದ ಮಹಿಳೆ!

Share the Article

Daughters Fiance: ತನ್ನ ಮಗಳಿಗೆ ನಿಶ್ಚಯವಾಗಿದ್ದ ಭಾವಿ ಅಳಿಯನ ಜೊತೆ ನಗ, ನಗದು ಜೊತೆ ಓಡಿ ಹೋಗಿದ್ದ ಮಹಿಳೆ ಇದೀಗ ಪೊಲೀಸರಿಗೆ ಶರಣಾಗಿದ್ದು, ತಾನು ಓಡಿ ಹೋಗಲು ಕಾರಣವೇನು ಎನ್ನುವುದನ್ನು ತಿಳಿಸಿದ್ದಾರೆ. ಹಾಗೆನೇ ಇದರ ಜೊತೆಗೆ ತಾನು ಅವನನ್ನೇ ಮದುವೆಯಾಗುವುದಾಗಿ ಪಟ್ಟು ಹಿಡಿದಿರುವ ಘಟನೆ ನಡೆದಿದೆ.

ಮನೆಯಿಂದ ಹೋಗುವಾಗ ನಾನು ಹಣ ಕದ್ದೊಯ್ದಿರುವ ಕುರಿತ ಆರೋಪವನ್ನು ಮಹಿಳೆ ತಳ್ಳಿ ಹಾಕಿದ್ದು, ನಾನು ಮನೆಯಿಂದ ಹೋಗುವಾಗ ನನ್ನ ಮೊಬೈಲ್‌, 200 ರೂ. ಮಾತ್ರ ತೆಗೆದುಕೊಂಡು ಹೋಗಿದ್ದು, ಮತ್ತೊಬ್ಬ ಮಗಳು ಶಿವಾನಿ ಮನೆಯಲ್ಲಿದ್ದ ನಗ, ನಗದನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಿದ್ದಾರೆ.

ಇನ್ನೊಂದು ಕಡೆ ರಾಹುಲ್‌ ಕುಮಾರ್‌ನನ್ನು ವಿವಾಹವಾಗುತ್ತೀಯಾ ಎಂದು ಕೇಳಿದಾಗ ಆತನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಸಪ್ನಾಳ ಕುಟುಂಬದವರು ಆಕೆ ಇನ್ನು ಮನೆಗೆ ಬರುವುದು ಬೇಡ, ಮನೆಯಿಂದ ತೆಗೆದುಕೊಂಡು ಹೋಗಿರುವ ನಗ, ನಗದು ಕೊಟ್ಟರೆ ಸಾಕು ಎಂದು ಹೇಳಿದ್ದಾರೆ.

Comments are closed.