Caste Census: ‘ಜಾತಿಗಣತಿ ವರದಿ’ ವಿವಾದ – ಲಿಂಗಾಯತ ಸಮುದಾಯದ 7 ಜನ ಪ್ರಭಾವಿ ಸಚಿವರಿಂದ ರಾಜೀನಾಮೆ?

Caste Census : ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾದ ಜಾತಿಗಣತಿ ವರದಿಯು ರಾಜ್ಯಾದ್ಯಂತ ಹೊಸ ಕಿಚ್ಚನ್ನು ಹಬ್ಬಿಸಿದೆ. ಪ್ರಬಲ ಸಮುದಾಯಗಳು ಈ ವರದಿ ಕುರಿತು ಆಕ್ರೋಶ ವ್ಯಕ್ತಪಡಿಸಿ ಸರ್ಕಾರದ ವಿರುದ್ಧ ಕಿಡಿ ಕಾರಿವೆ. ಸ್ವತಹ ಕಾಂಗ್ರೆಸ್ ಶಾಸಕರು, ಸಚಿವರೆ ಈ ವರದಿ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸುವಂತಹ ಸುದ್ದಿ ಒಂದು ಹರಿದಾಡುತ್ತಿದ್ದು, ಜಾತಿಗಣತಿ ವರದಿ ವಿವಾದದ ಹಿನ್ನೆಲೆಯಲ್ಲಿ ಲಿಂಗಾಯತ ಸಮುದಾಯದ ಏಳು ಜನ ಪ್ರಭಾವಿ ಸಚಿವರು ರಾಜೀನಾಮೆ ಸಲ್ಲಿಸಲು ತಯಾರಿ ನಡೆಸಿದ್ದಾರೆ ಎನ್ನಲಾಗಿದೆ.
ಹೌದು, ರಾಜ್ಯ ಸರ್ಕಾರವು ಜಾತಿಗಣತಿ ವರದಿ ಹಿನ್ನೆಲೆಯಲ್ಲಿ ತನ್ನ ಸಂಪುಟ ಸಚಿವರಿಂದಲೇ ಅನೇಕ ವಿರೋಧವನ್ನು ಎದುರಿಸುತ್ತಿದೆ. ಈ ಬೆನ್ನಲ್ಲೇ ಪರಿಸ್ಥಿತಿ ಈ ರೀತಿ ಇರುವಾಗಲೇ ಲಿಂಗಾಯತ ಸಮುದಾಯ 7 ಜನರ ಸಚಿವರು ರಾಜೀನಾಮೆ ವಿಷಯ ಚರ್ಚೆಯಾಗುತ್ತಿದೆ.
ಕರ್ನಾಟಕ ಸರ್ಕಾರದ ಜಾತಿ ಗಣತಿ ವರದಿಯಿಂದ ಲಿಂಗಾಯತ ಸಮುದಾಯಕ್ಕೆ ಅನ್ಯಾಯವಾಗಿದೆ. ಈ ಅನ್ಯಾಯವನ್ನು ವಿರೋಧಿಸಿ 7 ಜನ ಲಿಂಗಾಯತ ಸಮುದಾಯದ ಸಚಿವರು ರಾಜೀನಾಮೆ ಕೊಡಬೇಕು ಎಂದು ಸ್ವಪಕ್ಷದವರಿಂದಲೇ ಆಗ್ರಹ ಕೇಳಿ ಬಂದಿದೆ. ಕರ್ನಾಟಕದ ಲಿಂಗಾಯತ ಸಚಿವರು ಕೂಡಲೇ ರಾಜೀನಾಮೆ ನೀಡಬೇಕು. 7 ಜನ ಸಚಿವರೂ ಅಸಮರ್ಥರಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಶಾಸಕ ಹಾಗೂ ಲಿಂಗಾಯತ ಸಮುದಾಯದ ನಾಯಕ ಶಿವಗಂಗಾ ಬಸವರಾಜ್ ಕಿಡಿಕಾರಿದ್ದಾರೆ.
ಈ ಕುರಿತಾಗಿ ಮಾತನಾಡಿದ ಅವರು ‘ಒಕ್ಕಲಿಗ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಒಕ್ಕಲಿಗ ನಾಯಕ ಡಿ.ಕೆ ಶಿವಕುಮಾರ್ ಅವರು ಅವರ ಸಮುದಾಯದವರನ್ನು ಕರೆದು ಸಭೆ ನಡೆಸಿದ್ದಾರೆ. ಆದರೆ, ನಮ್ಮ ಸಮುದಾಯದ ಯಾವೊಬ್ಬ ಸಚಿವರೂ ಈ ಬಗ್ಗೆ ಮಾತನಾಡಿಲ್ಲ. ಯಾರಾದರೂ ನಮ್ಮ ಸಮುದಾಯದ ಶಾಸಕರನ್ನು ಕರೆದು ಸಭೆ ಮಾಡಿದ್ದಾರೆಯೇ ಇಲ್ಲ. ಇನ್ನು ಸಚಿವ ಈಶ್ವರ ಖಂಡ್ರೆ ಅವರಿಗೆ ಫೋನ್ ಮಾಡಿದರೆ ಅವರು ಫೋನ್ ಸ್ವೀಕರಿಸುತ್ತಿಲ್ಲ. ಇವರನ್ನೆಲ್ಲ ನಂಬಿಕೊಂಡು ಯಾವ ರೀತಿ ರಾಜಕೀಯ ಮಾಡಬೇಕು ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಅಲ್ಲದೆ “ನಮ್ಮ ಸಮುದಾಯದ ಶಾಸಕರು ಹಾಗೂ ಸಚಿವರು ಒಂದೆಡೆ ಸೇರಿ ನಾವು ಸಭೆ ಮಾಡೋಣ ಅಂತ ಹೇಳುವುದಕ್ಕೆ ಪ್ರಯತ್ನಪಟ್ಟೆ ಆದರೆ ಸಹಕಾರ ಸಿಗಲಿಲ್ಲ. ಫೋನ್ ಸ್ವೀಕರಿಸಲಿಲ್ಲ. ನಮ್ಮ ಸಮುದಾಯಕ್ಕೆ ಅನ್ಯಾಯವಾಗುತ್ತಿದ್ದರೂ 7 ಜನ ಸಚಿವರು ಮಾತನಾಡುತ್ತಿಲ್ಲ. ಹೀಗಾಗಿ ಇವರು ರಾಜೀನಾಮೆ ಕೊಡಬೇಕು. ಇನ್ನು ನಾಳೆ ಮಠಾಧೀಶರು ಹಾಗೂ ನಮ್ಮ ಸಮಾಜದವರ ನಮ್ಮನ್ನು ಕೇಳಿದರೆ ಏನು ಹೇಳಬೇಕು. ಎಲ್ಲಾ ಸಮುದಾಯದವರೂ ಬೇಕು ನಮ್ಮ ಸಮುದಾಯದವರೂ ಬೇಕು. ಆಯಾ ಸಮುದಾಯದ ನಾಯಕರು ಅಂತ ಮಾಡಿರುತ್ತಾರೆ ಮುಂದೆ ವೋಟ್ ಕೇಳುವುದು ಹೇಗೆ?” ಎಂದು ಅವರು ಪ್ರಶ್ನಿಸಿದ್ದಾರೆ.
Comments are closed.