Rajat Kishan: ರಜತ್‌ಗೆ ಬಿಗ್‌ ರಿಲೀಫ್‌; ಜೈಲಿಂದ ಬಿಡುಗಡೆ!

Share the Article

Rajat Kishan: ಮಚ್ಚು ಹಿಡಿದು ರೀಲ್ಸ್‌ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಜತ್‌ ಕಿಶನ್‌ಗೆ ಜಾಮೀನು ಮಂಜೂರಾಗಿದೆ. 24 ನೇ ಎಸಿಎಂಎಂ ಕೋರ್ಟ್‌ ರಜತ್‌ಗೆ ಜಾಮೀನು ನೀಡಿ ಆದೇಶ ಹೊರಡಿಸಿದೆ. ಎಪ್ರಿಲ್‌ 16 ರಂದು ರಜತ್‌ ವಾಪಸು ಜೈಲು ಸೇರಿದ್ದರು.

ಕೋರ್ಟ್‌ಗೆ ಗೈರಾಗಿದ್ದ ಕಾರಣ ರಜತ್‌ ಮೇಲೆ ವಾರೆಂಟ್‌ ಇಶ್ಯೂ ಮಾಡಲಾಗಿತ್ತು. ಕೋರ್ಟ್‌ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು. ನೆನ್ನೆ ಜಾಮೀನು ಅರ್ಜಿ ಸಲ್ಲಿಸಿದ್ದು, ಇವತ್ತು ನ್ಯಾಯಾಧೀಶರು ಆದೇಶ ಕಾಯ್ದಿರಿಸಿದ್ದರು. ಪರಪ್ಪನ ಅಗ್ರಹಾರದಿಂದ ರಜತ್‌ಗೆ ಬಿಡುಗಡೆ ಭಾಗ್ಯ ದೊರಕಿದೆ.

ಷರತ್ತು ಬದ್ಧ ಜಾಮೀನು ನೀಡಿದ ಹಿನ್ನೆಲೆಯಲ್ಲಿ ವಿನಯ್‌ ಮತ್ತು ರಜತ್‌ ರಿಲೀಸ್‌ ಆಗಿದ್ದರು. ರಜತ್‌ ಅವರು ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ನ್ಯಾಯಾಲಯರ ಆರೋಪಿ ರಜತ್‌ ವಿರುದ್ಧ ವಾರೆಂಟ್‌ ಹೊರಡಿಸಿತ್ತು.

Comments are closed.