Snake Bike: ನಿದ್ದೆಲ್ಲಿದ್ದವನಿಗೆ ಹತ್ತು ಬಾರಿ ಕಚ್ಚಿ ಕೊಂದ ಹಾವು!

Share the Article

Snake Bike: ವ್ಯಕ್ತಿಯೋರ್ವ ಮಲಗಿದ್ದಾಗ ಹಾವೊಂದು ಹಲವು ಬಾರಿ ಕಚ್ಚಿದ ಪರಿಣಾಮ ಸಾವಿಗೀಡಾಗಿದ್ದಾನೆ. ಹಾವು ಬೆಳಿಗ್ಗೆಯವರೆಗೆ ಆತ್ನ ನಿರ್ಜೀವ ದೇಹದ ಕೆಳಗೆ ಸುರುಳಿಯಾಗಿತ್ತು.

ಬಹ್ಸುಮಾ ಪೊಲೀಸ್‌ ಠಾಣಾ ವ್ಯಾಪ್ತಿಯ ಅಕ್ಬರ್‌ಪುರ ಸಾದತ್‌ ಗ್ರಾಮದಲ್ಲಿ ನಡೆದಿದೆ.

ಅಮಿತ್‌ ಅಲಿಯಾಸ್‌ ಮಿಕ್ಕಿ ಎಂಬಾತ ಮಲಗಿದ್ದು, ಈತ ಕೂಲಿ ಕಾರ್ಮಿಕ ಮೂವರು ಮಕ್ಕಳ ತಂದೆ. ಶನಿವಾರ ರಾತ್ರಿ ಕೆಲಸ ಮುಗಿಸಿ ಮನೆಗೆ ಹಿಂದಿರುಗಿದ್ದು, ಊಟ ಮಾಡಿ ಎಂದಿನಂತೆ ಮಲಗಿದ್ದಾನೆ. ಭಾನುವಾರ ಬೆಳಿಗ್ಗೆ 5.30ಕ್ಕೆ ಕುಟುಂಬ ಸದಸ್ಯರು ಅವನನ್ನು ಎಬ್ಬಿಸಲು ಕೋಣೆಗೆ ಹೋದಾಗ, ಆತ ಅಲುಗಾಡದೇ ಇರುವುದನ್ನು ಕಂಡು ಶಾಕ್‌ಗೊಳಗಾಗಿದ್ದಾರೆ. ಆತನನ್ನು ಅಲ್ಲಾಡಿಸಿ ಎಬ್ಬಿಸಲು ಪ್ರಯತ್ನ ಮಾಡಿದಾಗ ಆತನ ದೇಹದ ಕೆಳಗೆ ಹಾವು ಕುಳಿತಿದ್ದನ್ನು ನೋಡಿ ದಂಗಾಗಿದ್ದಾರೆ. ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ವೈದ್ಯರು ಬಂದು ಆತ ಮೃತ ಹೊಂದಿರುವುದಾಗಿ ಹೇಳಿದ್ದಾರೆ.

ಪೊಲೀಸರು ನಂತರ ಸ್ಥಳಕ್ಕಾಗಮಿಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

Comments are closed.