Toll: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಉಪಗ್ರಹ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆ: ಮೇ 1ರಿಂದ ಜಾರಿ

Share the Article

Toll: ದೇಶದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಉಪಗ್ರಹ ಆಧಾರಿತ ಟೋಲ್‌ ಸಂಗ್ರಹ ವ್ಯವಸ್ಥೆ ಮೇ 1ರಿಂದ ಜಾರಿಗೆ ಬರಲಿದ್ದು ಇದರಿಂದಾಗಿ ಟೋಲ್ ಪ್ಲಾಜಗಳಲ್ಲಿ ಕಾಯುವ ಸಮಯವನ್ನು ಕಡಿಮೆ ಮಾಡಬಹುದಾಗಿದೆ. ಮಾತ್ರವಲ್ಲದೇ ಪ್ರತಿದಿನ ಆಯ್ದ ರಾಷ್ಟ್ರೀಯ ಹೆದ್ದಾರಿ ಮತ್ತು ಎಕ್ಸೆಸ್ ವೇಗಳಲ್ಲಿ 20km ವರೆಗೆ ಟೋಲ್ ಪಾವತಿ ಮಾಡದೆ ಸಂಚರಿಸಲು ಅವಕಾಶ ಒದಗಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಸರ್ಕಾರವು ಮೊದಲ ಹಂತದಲ್ಲಿ ಜಿಎನ್‌ಎಸ್ಎಸ್ ಆಧಾರಿತ ಟೋಲ್ ವ್ಯವಸ್ಥೆ ಪತ್ತೆ ಹಚ್ಚಲು ಟೂಲ್ ಪ್ಲಾಜಾಗಳಲ್ಲಿ ವಿಶೇಷ ಲೇನ್ ಮತ್ತು ಟೋಲ್ ಬೂತ್ ಗೆ ವಿಶೇಷ ಗುರುತು ಮಾಡಲಾಗುತ್ತದೆ. ಈಗಾಗಲೇ ಬೆಂಗಳೂರು-ಮೈಸೂರು, ಪಾಣಿಪತ್ -ಹಿಸಾರ್ ಹೆದ್ದಾರಿಯಲ್ಲಿ ಜಿಎನ್‌ಎಸ್‌ಎಸ್‌ ವ್ಯವಸ್ಥೆ ಪ್ರಾಯೋಗಿಕವಾಗಿ ಜಾರಿಯಲ್ಲಿದೆ ಎಂದು ತಿಳಿಸಿದೆ.

ಕಾರ್ಯನಿರ್ವಹಿಸುವ ವಿಧಾನ:
* ಉಪಗ್ರಹ ಬಳಸಿ ವಾಹನ ಸಂಚಾರದ ಸ್ಥಳ ಪತ್ತೆ
* ವಾಹನ ಸಂಚರಿಸಿದ ದೂರದ ಆಧಾರದಲ್ಲಿ ಶುಲ್ಕ ಸಂಗ್ರಹ
* ಹೆದ್ದಾರಿಗೆ ವಾಹನ ಪ್ರವೇಶಿಸಿದ ಕ್ಷಣವೇ ಟೋಲ್ ಆರಂಭ
* ವಾಹನಕ್ಕೆ ಲಿಂಕ್ ಆಗಿರುವ ಬ್ಯಾಂಕಿನಿಂದ ಶುಲ್ಕ ಕಡಿತ.

Comments are closed.