Mangaluru: ಮಂಗಳೂರು: ಎನ್‌ಐಟಿಕೆ ಬೀಚ್‌ನಲ್ಲಿ ಈಜಲು ತೆರಳಿದ್ದ ಯುವಕ ಸಾವು: ಓರ್ವ ನಾಪತ್ತೆ..!

Share the Article

Mangaluru: ಸುರತ್ಕಲ್‌ (Mangaluru) ಎನ್‌ಐಟಿಕೆ ಬಳಿ ಬೀಚ್ ನಲ್ಲಿ ಸಮುದ್ರದಲ್ಲಿ ಆಡಲು ತೆರಳಿದ್ದ ಸಂದರ್ಭ ಅಲೆಗಳ ಅಬ್ಬರಕ್ಕೆ ಇಬ್ಬರು ಯುವಕರು ನೀರುಪಾಲಾದ ಘಟನೆ ಇಂದು ನಡೆದಿದ್ದು, ಓರ್ವನ ಮೃತದೇಹ ಪತ್ತೆಯಾಗಿದ್ದು, ಮತ್ತೊಬ್ಬ ಯುವಕ ನಾಪತ್ತೆಯಾಗಿದ್ದಾನೆ.

ಮೃತಪಟ್ಟ ಯುವಕರನ್ನು ಧ್ಯಾನ್ ಬಂಜನ್ (18) ಮತ್ತು ಹನೀಶ್ ಕುಲಾಲ್ (15) ಎಂದು ಗುರುತಿಸಲಾಗಿದೆ. ಇವರು ಮಂಗಳವಾರ ಸಂಜೆ 5.30ರ ವೇಳೆಗೆ ಎನ್‌ಐಟಿಕೆ ಬೀಚ್ ಬಳಿಗೆ ಬಂದಿದ್ದು ಸಮುದ್ರಕ್ಕೆ ಇಳಿದಿದ್ದರು. ನೀರಿನಲ್ಲಿ ಆಡುತ್ತಿದ್ದಾಗಲೇ ಧ್ಯಾನ್ ಮತ್ತು ಹನೀಶ್ ಕುಲಾಲ್ ನೀರಿನ ಅಲೆಯಲ್ಲಿ ಸಿಲುಕಿದ್ದು ಈ ವೇಳೆ ಲೈಫ್ ಗಾರ್ಡ್ ಸಿಬಂದಿ ಪ್ರದೀಪ್ ಆಚಾರ್ಯ ಅಲೆಗಳ ಎಡೆಯಿಂದ ಧ್ಯಾನ್ ನನ್ನು ಎಳೆದು ಮೇಲಕ್ಕೆ ತಂದಿದ್ದಾರೆ. ಆದರೆ ಹನೀಶ್ ಕುಲಾಲ್ ಜೀವರಕ್ಷಕ ಸಿಬಂದಿ ಕೈಗೆ ಸಿಗದೆ ನಾಪತ್ತೆಯಾಗಿದ್ದಾರೆ.

ಧ್ಯಾನ್‌ ನನ್ನು ಕೂಡಲೇ ಸುರತ್ಕಲ್ ಪದ್ಮಾವತಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದರೂ ಅಷ್ಟರಲ್ಲಿ ಸಾವನ್ನಪ್ಪಿದ್ದಾರೆ. ಹನೀಶ್ ಪತ್ತೆಗಾಗಿ ಲೈಫ್ ಗಾರ್ಡ್ ಸಿಬ್ಬಂದಿ ಮತ್ತು ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸಿದ್ದಾರೆ. ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.