Education: 1 ತರಗತಿ ನೋಂದಣಿಗೆ ಕನಿಷ್ಠ ವಯಸ್ಸು ಘೋಷಿಸಿದ ಸರ್ಕಾರ!

Education: ಒಂದನೇ ತರಗತಿಗೆ ಮಕ್ಕಳನ್ನು ಸೇರಿಸಲು ಐದು ವರ್ಷ ಐದು ತಿಂಗಳು ತುಂಬಿದ್ದರೆ ಸಾಕು ಎಂದು ಶಿಕ್ಷಣ (Education) ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ರಾಜ್ಯ ಶಿಕ್ಷಣ ನಿಯಮದ ಆಧಾರದ ಮೇರೆಗೆ ಮಗುವಿಗೆ ಒಂದನೇ ತರಗತಿ ಸೇರ್ಪಡೆ ಮಾಡಲು ಆರು ವರ್ಷ ತುಂಬಿರುವುದು ಕಡ್ಡಾಯವಾಗಿತ್ತು. ಈಗ ಈ ನಿಯಮವನ್ನು ಶಿಕ್ಷಣ ಇಲಾಖೆ ಸಡಿಲಗೊಳಿಸಿದೆ. ಇನ್ನು ಮುಂದೆ ಒಂದನೇ ತರಗತಿ ನೋಂದಣಿಯಾಗುವ ಮಕ್ಕಳಿಗೆ ಜೂನ್ 2025 ಕ್ಕೆ ಐದು ವರ್ಷ ಐದು ತಿಂಗಳು ಆಗಿರಬೇಕು.
Comments are closed.