Ayodhya: ಅಯೋಧ್ಯೆ ರಾಮ ಮಂದಿರಕ್ಕೆ ಬಾಂಬ್ ಬೆದರಿಕೆ; ಸೈಬ‌ರ್ ಸೆಲ್‌ನಲ್ಲಿ ಕೇಸ್‌ ದಾಖಲು!

Share the Article

Ayodhya: ಈಗಾಗಲೇ ಶ್ರೀರಾಮಮಂದಿರವನ್ನು ಸ್ಫೋಟಿಸುವುದಾಗಿ ಜೈಶ್-ಎ-ಮೊಹಮ್ಮದ್ ಸಂಘಟನೆಯು ಅನೇಕ ಬಾರಿ ಬೆದರಿಕೆ ಇ-ಮೇಲ್ ಕಳುಹಿಸಿದೆ. ಇದರ ಬೆನ್ನಲ್ಲೇ ಅಯೋಧ್ಯೆಯಲ್ಲಿರುವ (Ayodhya) ರಾಮ ಮಂದಿರಕ್ಕೆ ಇಂದು ಬಾಂಬ್ ಬೆದರಿಕೆ ಬಂದಿದ್ದು ಸೈಬ‌ರ್ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆ‌ರ್ ದಾಖಲಾಗಿದೆ. ತನಿಖಾಧಿಕಾರಿಗಳು ಬೆದರಿಕೆ ಇ ಮೇಲ್ ಮೂಲ ಹುಡುಕಿದ್ದು ಅದು ತಮಿಳುನಾಡಿನಿಂದ ಬಂದಿರುವುದಾಗಿ ಪ್ರಾಥಮಿಕ ವರದಿಗಳು ಹೇಳಿವೆ. ಇದರ ಜೊತೆಯಲ್ಲೇ, ಮುನ್ನೆಚ್ಚರಿಕೆ ಕ್ರಮವಾಗಿ ಶ್ರೀರಾಮಮಂದಿರಕ್ಕೆ ಒದಗಿಸಲಾಗಿದ್ದ ಬಿಗಿಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ಈಗ ತಮಿಳುನಾಡಿನಿಂದ ಬಂದಿದೆ ಎಂದು ಹೇಳಲಾಗಿರುವ ಇ-ಮೇಲ್ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.

Comments are closed.