Deepfake: ಬಿಜೆಪಿಯಿಂದ ಸಿಎಂ ಸಿದ್ದರಾಮಯ್ಯ ದುಡ್ಡು ತಿನ್ನೋ ವಿಡಿಯೋ ವೈರಲ್!!

Deepfacke: ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಣವನ್ನು ತಿನ್ನುತ್ತಿರುವ ಡೀಪ್ ಫೇಕ್ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲಾಗುತ್ತಿದೆ. ಇದನ್ನು ಬಿಜೆಪಿ ಶೇರ್ ಮಾಡಿಕೊಂಡು ಸಿದ್ದರಾಮಯ್ಯ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
ಕಮಿಷನ್, ಕಲೆಕ್ಷನ್, ಕರೆಪ್ಶನ್ ಮೂಲಕ ಗಳಿಸಿದ ಹಣವನ್ನು ಭ್ರಷ್ಟರು ಮುಕ್ಕುತ್ತಿದ್ದಾರೆ.#CongressFailsKarnataka pic.twitter.com/xaZYDzYsQE
— BJP Karnataka (@BJP4Karnataka) April 15, 2025
ಸಿದ್ದರಾಮಯ್ಯ ಅವರ ವಿಡಿಯೋ ಒಂದನ್ನು ಡೀಪ್ ಫೇಕ್ ಟೆಕ್ನಾಲಜಿಯ ಮೂಲಕ ಸೃಷ್ಟಿಸಿ ಬಿಜೆಪಿ ಟ್ರೋಲ್ ಮಾಡಿದೆ. ಜೊತೆಗೆ, ಕಮಿಷನ್ ,ಕಲೆಕ್ಷನ್ ಮತ್ತು ಕರೆಪ್ಷನ್ ಮೂಲಕ ಗಳಿಸಿದ ಹಣವನ್ನು ಭ್ರಷ್ಟರು ಮುಕ್ಕುತ್ತಿದ್ದಾರೆ ಎಂದು ಶೀರ್ಷಿಕೆ ನೀಡಿ ಬಿಜೆಪಿ ಟೀಕಿಸಿದೆ. ಬಿಜೆಪಿ ಅಧಿಕೃತ ಟ್ವೀಟ್ ಹ್ಯಾಂಡಲ್ ನಲ್ಲಿ ಪೋಸ್ಟ್ ಮಾಡಿರುವ ವಿಡಿಯೋ ಈಗ ವೈರಲ್ ಆಗಿದೆ.
ಹಿನ್ನೆಲೆಯಲ್ಲಿರುವ ಹಾಡಿನಲ್ಲಿ , ಯಾರಾದರೂ ಹಾಳಾಗೋಗ್ಲಿ ನಾವು ನೆಟ್ಟಗಿದ್ರೆ ಸಾಕು, ಬೇನಾಮಿ ಆಸ್ತಿ ಮಾಡಿ ಜಂಬ ಕೊಚ್ಕೋಬೇಕು, ನಾವು ತುಂಬಾ ಸಾಚಾ ಅಂತ ಗಂಟೆ ಹೊಡೀಬೇಕು ಎಂದು ಹೇಳಲಾಗಿದೆ.
Comments are closed.