Nelyadi: ಡಿವೈಡರ್‌ಗೆ KSRTC ಬಸ್‌ ಡಿಕ್ಕಿ- 13 ಪ್ರಯಾಣಿಕರಿಗೆ ಗಾಯ!

Share the Article

Nelyadi: ಕುಂದಾಪುರ ಡಿಪೋಗೆ ಸೇರಿದ ಕೆಎಸ್‌ಆರ್ ಟಿಸಿ ಬಸ್ಸು ಧರ್ಮಸ್ಥಳದಿಂದ ಬೆಂಗಳೂರಿಗೆ ಹೋಗುತ್ತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಗ್ರಾಮದ ಅಡ್ಡಹೊಳೆಯಲ್ಲಿ ಡಿವೈಡರ್ ಗೆ ಡಿಕ್ಕಿಯಾಗಿದೆ. ಎ.14ರಂದು ರಾತ್ರಿ 9.30ರ ವೇಳೆಗೆ ನಡೆದಿದೆ.

ದಂಪತಿ ಸಹಿತ ಮೂವರು ಪ್ರಯಾಣಿಕರು ಗಂಭೀರ ಗಾಯಗೊಂಡಿದ್ದು 10 ಮಂದಿಗೆ ಸಣ್ಣಪುಟ್ಟ ಗಾಯವಾಗಿರುವುದಾಗಿ ವರದಿಯಾಗಿದೆ.

ಬಸ್ಸಿನ ಟಯರ್ ಸ್ಪೋಟಗೊಂಡ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಬಸ್ಸು ಡಿವೈಡರ್‌ಗೆ ಡಿಕ್ಕಿಯಾಗಿದೆ ಎಂದು ಹೇಳಲಾಗಿದೆ.

ಘಟನೆಯಲ್ಲಿ ಬಸ್ಸಿನಲ್ಲಿದ್ದ ಹಾಸನ ಪಾಳ್ಯ ನಿವಾಸಿಗಳಾದ ಚಂದ್ರು (68ದ.), ಅವರ ಪತ್ನಿ ಸರೋಜ(60ವ.) ಹಾಗೂ ಇನ್ನೊಬ್ಬರು ಪ್ರಯಾಣಿಕರು ಸೇರಿ ಮೂವರು ಗಂಭೀರ ಗಾಯಗೊಂಡಿದ್ದು ಇವರು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

Comments are closed.