Karnataka: ಜಾತಿ ಗಣತಿ ವಿರೋಧಿಸಿ ಕರ್ನಾಟಕ ಬಂದ್: ಹೋರಾಟಕ್ಕೆ ಸಜ್ಜಾದ ಒಕ್ಕಲಿಗರ ಸಂಘ!

Karnataka: ರಾಜ್ಯ ಸರ್ಕಾರದ (Karnataka) ಜಾತಿ ಗಣತಿ ವರದಿಯು ಭಾರೀ ಸಂಚಲನ ಮೂಡಿಸಿದ್ದು, ಇದೀಗ ಒಕ್ಕಲಿಗರ ಸಮುದಾಯವು ವರದಿ ವಿರೋಧಿಸಿ ಹೋರಾಟಕ್ಕೆ ಮುಂದಾಗಿದೆ.

ರಾಜ್ಯ ಒಕ್ಕಲಿಗರ ಸಂಘದಿಂದ ಇಂದು ಸಭೆ ನಡೆಸಲಾಗಿದ್ದು, ಮುಂದಿನ ಹೋರಾಟದ ಬಗ್ಗೆ ಚರ್ಚೆ ಮಾಡಿದ್ದೇವೆ.
ಸರಿಯಾದ ವರದಿ ಕೊಟ್ಟಿಲ್ಲ ಎಂದು ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪಗೌಡ ಅವರು ಆಕ್ರೋಶ ಹೊರಹಾಕಿದ್ದಾರೆ.

ಒಕ್ಕಲಿಗರ ಸಂಖ್ಯೆ 61 ಲಕ್ಷ ಎಂದು ವರದಿಯಲ್ಲಿ ತೋರಿಸಿದ್ದಾರೆ. ನಮಗೆ ಅನ್ಯಾಯ ಮಾಡುತ್ತಿದ್ದಾರೆ. ಎಲ್ಲರೂ ಒಂದಾಗಿ ಕರ್ನಾಟಕ ಬಂದ್‌ ಮಾಡಬೇಕು. ಅನ್ಯಾಯಕ್ಕೊಳಗಾದವರೆಲ್ಲ ಸೇರಿ ಬಂದ್‌ ಮಾಡಬೇಕು ಎಂದು ಅವರು ಕರೆ ನೀಡಿದರು. ಅಲ್ಲದೇ ವೀರಶೈವ ಸಮುದಾಯದವರ ಬಳಿಯೂ ಹೋರಾಟದ ಬಗ್ಗೆ ಮಾತನಾಡುತ್ತೇವೆ ಎಂದರು.

ಒಕ್ಕಲಿಗ ಸಂಘದ ಪ್ರಧಾನ ಕಾರ್ಯದರ್ಶಿ ಕೋನಪ್ಪ ರೆಡ್ಡಿ ಮಾತನಾಡಿ, ಸರ್ಕಾರದ ವಿರುದ್ಧ ಪ್ರತಿಭಟನೆಗೆ ಒಕ್ಕಲಿಗರ ಸಂಘದಿಂದ ಸಿದ್ಧತೆ ಮಾಡುತ್ತಿದ್ದೇವೆ. ಏ.17ರ ಬಳಿಕ ಹೋರಾಟದ ಬಗ್ಗೆ ರೂಪುರೇಷೆ ಕುರಿತು ನಿರ್ಧರಿಸುತ್ತೇವೆ. ಸಮುದಾಯದ ಪರ ಇರುವ ಎಲ್ಲ ಸಭೆಗೆ ಹೂಗುತ್ತೇವೆ. ಒಕ್ಕಲಿಗ ಹಾಗೂ ಲಿಂಗಾಯತರನ್ನು ಮುಗಿಸುವ ಹುನ್ನಾರ ನಡೆದಿದೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ಮಾಡಿ ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

Comments are closed.