OYO: OYO ಸಂಸ್ಥೆ ಮೇಲೆ FIR ದಾಖಲು!!

Share the Article

OYO ಸಂಸ್ಥೆ ತನ್ನ ವಾರ್ಷಿಕ ವಹಿವಾಟು ಹೆಚ್ಚಾಗಿ ತೋರಿಸಿಕೊಳ್ಳಲು ಇತರೆ ಹೋಟೆಲ್ ಗಳ ಮೇಲೆ ಫೇಕ್ ಬುಕಿಂಗ್ ತೋರಿಸಿದೆ ಎಂಬ ಆರೋಪದ ಅಡಿ ಓಯೋ ಸಂಸ್ಥೆ FIR ದಾಖಲಾಗಿದೆ.

ಹೌದು, ಆನ್ ಲೈನ್ ರೂಮ್ ಬುಕಿಂಗ್ ಪ್ಲಾಟ್ ಫಾರ್ಮ್ OYO ವಿರುದ್ಧ ಸಂಸ್ಕಾರ ರೆಸಾರ್ಟ್ಸ್‌ ನ ಮಾಲೀಕರು ದೂರು ನೀಡಿದ್ದಾರೆ. ಓಯೋ ಸಂಸ್ಥೆ ತನ್ನ ವಾರ್ಷಿಕ ವಹಿವಾಟು ಹೆಚ್ಚಾಗಿ ತೋರಿಸಿಕೊಳ್ಳಲು ಇತರೆ ಹೋಟೆಲ್ ಗಳ ಮೇಲೆ ಫೇಕ್ ಬುಕಿಂಗ್ ತೋರಿಸಿದ ಪರಿಣಾಮ ಈ ಬಿಲ್ ಗಳ ಆಧಾರದ ಮೇಲೆ ಹಲವು ಹೋಟೆಲ್ ಗಳಿಗೆ ಕೋಟ್ಯಂತರ ರೂಪಾಯಿ GST ಬಿಲ್ ಬಂದಿದ್ದು ಮಾಲೀಕರು ಶಾಕ್ ಆಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ದೂರುದಾರ ಸಂಸ್ಕಾರ ರೆಸಾರ್ಟ್ಸ್‌ಗೆ 2.66 ಕೋಟಿ ರೂ.ಗಳ ಜಿಎಸ್‌ಟಿ ಶೋಕಾಸ್ ನೋಟಿಸ್ ಬಂದಿದೆ ಎಂದಿದ್ದಾರೆ.

ಅಲ್ಲದೆ ಹೆಚ್ಚಿನ ವಾರ್ಷಿಕ ವಹಿವಾಟು ತೋರಿಸಲು, ಸಾವಿರಾರು ನಕಲಿ ಬುಕಿಂಗ್‌ಗಳನ್ನು ಸಂಸ್ಕಾರ ರೆಸಾರ್ಟ್ ಹೆಸರಿನಲ್ಲಿ ತೋರಿಸಲಾಗಿದೆ ಎಂದು ಆರೋಪಿಸಿದ್ದಾರೆ. ಹೀಗಾಗಿ ದೂರು ನೀಡಿದ್ದು ಎಫ್‌ಐಆರ್‌ನಲ್ಲಿ ಒರಾವೆಲ್ ಸ್ಟೇಸ್ ಪ್ರೈವೇಟ್ ಲಿಮಿಟೆಡ್ ಸಿಇಒ ರಿತೇಶ್ ಅಗರ್ವಾಲ್ ಮತ್ತು ಇತರ ಹಲವರ ವಿರುದ್ಧ ಆರೋಪ ಮಾಡಲಾಗಿದೆ.

ಏಪ್ರಿಲ್ 18, 2019 ರಂದು 12 ತಿಂಗಳುಗಳ ಕಾಲ OYO ಜೊತೆಗೆ ಒಪ್ಪಂದವಿತ್ತು ಅಷ್ಟೇ.,ಆದರೆ 2018-19, 2019-20 ಮತ್ತು 2020-21 ರಲ್ಲಿ ಕೂಡ ಸಂಸ್ಕಾರದಲ್ಲಿ ಫೇಕ್ ಬುಕಿಂಗ್‌ಗಳನ್ನು ತೋರಿಸಿದೆ ಎಂದು ಆರೋಪಿಸಿದ್ದಾರೆ. ಹೀಗೆ OYO ಫೇಕ್ ಬುಕಿಂಗ್ ತೋರಿಸಿದ ಕಾರಣ ಈ ಬಿಲ್‌ಗಳ ಆಧಾರದ ಮೇಲೆ ಸುಮಾರು 20 ಹೋಟೆಲ್‌ಗಳಿಗೆ GST ನೋಟಿಸ್‌ಗಳು ಬಂದಿವೆ ಎನ್ನಲಾಗಿದೆ.

Comments are closed.