Bangalore: ಲಾರಿ ರಿವರ್ಸ್ ತೆಗೆಯುವಾಗ ವಿದ್ಯುತ್ ಶಾಕ್; ಚಾಲಕ ಸಾವು!

Share the Article

Bangalore: ಲಾರಿಯನ್ನು ರಿವರ್ಸ್ ತೆಗೆಯುವಾಗ ವಿದ್ಯುತ್ ಶಾಕ್ ತಗುಲಿ ಚಾಲಕನೊಬ್ಬ ಮೃತಪಟ್ಟ ಘಟನೆ ಕೆಂಗೇರಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೃತ ಲಾರಿ ಚಾಲಕನನ್ನು ಉತ್ತರ ಪ್ರದೇಶ ಮೂಲಕ ಚೋಟಾಕ್ (45) ಎಂದು ಗುರುತಿಸಲಾಗಿದೆ.

ಭಾನುವಾರ ರಾತ್ರಿ 9 ಗಂಟೆಗೆ ಈ ಘಟನೆ ಸನ್ ಸಿಟಿ ಸಮೀಪದ ಬಲಮುರಿ ಗಣೇಶ ದೇವಾಲಯದ ಬಳಿ ದುರಂತ ಸಂಭವಿಸಿದೆ.

ವಿದ್ಯುತ್ ಕಂಬದ ಬಳಿ ಲಾರಿ ನಿಲ್ಲಿಸಿದ್ದು, ರಿವರ್ಸ್ ತೆಗೆಯಲು ಮುಂದಾದಾಗ ಲಾರಿಯ ಟಾಪ್‌ಗೆ ವಿದ್ಯುತ್ ತಂತಿ ತಾಗಿದೆ. ಅನಂತರ ಲಾರಿಯನ್ನು ಮುಂದಕ್ಕೆ ಚಲಾಯಿಸಿದಾಗ ವಿದ್ಯುತ್ ಕಂಬ ಮುರಿದು ರಸ್ತೆಗೆ ಬಿದ್ದಿದೆ. ಆಗ ಚೋಟಾಕ್ ವಿದ್ಯುತ್ ಶಾಕ್‌ನಿಂದ ಮೃತಪಟ್ಟಿದ್ದಾನೆ.

ಘಟನೆ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.