Viral Video : ಭೂಕಂಪದಿಂದ ಮರಿಗಳನ್ನು ರಕ್ಷಿಸಲು ಆನೆಗಳು ಮಾಡಿದ್ದೇನು ಗೊತ್ತಾ? ಹೃದಯಸ್ಪರ್ಶಿ ವಿಡಿಯೋ ವೈರಲ್

Viral Video : ಭೂಕಂಪದ ವೇಳೆ ಮೃಗಾಲಯದಲ್ಲಿ ಆನೆಗಳ ಹಿಂಡು ಹೃದಯಸ್ಪರ್ಶಿ ಮತ್ತು ರಕ್ಷಣಾತ್ಮಕ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿರುವ ವಿಡಿಯೋ ಭಾರೀ ವೈರಲ್‌ ಆಗುತ್ತಿದೆ.

ಕ್ಯಾಲಿಫೋರ್ನಿಯಾದಲ್ಲಿ ಏಪ್ರಿಲ್ 14 ರಂದು ಸಂಭವಿಸಿದ 5.2 ತೀವ್ರತೆಯ ಭೂಕಂಪದ ಸಮಯದಲ್ಲಿ ಸ್ಯಾನ್ ಡಿಯಾಗೋ ಮೃಗಾಲಯದ ಸಫಾರಿ ಪಾರ್ಕ್‌ನಲ್ಲಿ ಆನೆಗಳು ಒಟ್ಟಾಗಿ ಕಿರಿಯ ಆನೆಗಳ ರಕ್ಷಣೆಗೆ ನಿಂತಿರುವುದು ಕಂಡುಬಂದಿದೆ. ಈ ಕುರಿತಾದ ವಿಡಿಯೋ ವೈರಲ್ ಆಗಿದೆ

ವೈರಲ್ ವಿಡಿಯೋದಲ್ಲಿ ನೆಲ ಅಲುಗಾಡುತ್ತಿದ್ದಂತೆ, ಮೂರು ವಯಸ್ಕ ಆನೆಗಳಾದ ಡ್ಲುಲಾ, ಉಮ್ಂಗಾನಿ ಮತ್ತು ಖೋಸಿ ತಮ್ಮ ಮರಿಗಳಾದ ಜುಲಿ ಮತ್ತು ಮಖಯಾ ಸುತ್ತಲೂ ನಿಂತು ರಕ್ಷಣೆ ಮಾಡಿವೆ. ಯಾವುದೇ ಸಂಭಾವ್ಯ ಅಪಾಯದಿಂದ ತಮ್ಮ ಮರಿಗಳನ್ನು ರಕ್ಷಿಸಲು ಆನೆಗಳು ಕೆಲ ಸಮಯಗಳ ವರೆಗೆ ಕಿವಿಗಳನ್ನು ಬಡಿಯುತ್ತಾ ಮತ್ತು ಎಚ್ಚರವಾಗಿ ಅದೇ ರಚನೆಯಲ್ಲಿ ನಿಂತಿರುವುದು ಕಂಡುಬಂದಿದೆ.

ಬುದ್ಧಿವಂತಿಕೆ ಮತ್ತು ಸೂಕ್ಷ್ಮತೆಗೆ ಹೆಸರುವಾಸಿಯಾದ ಆನೆಗಳು ಕಂಪನದಿಂದ ಭೀತಿಗೊಳಗಾದರೂ ತಮ್ಮನ್ನು ತಾವು ರಕ್ಷಿಸುವುದಕ್ಕಿಂತಲೂ ಮೊದಲು ತಮ್ಮ ಮರಿಗಳಿಗೆ ರಕ್ಷಣೆಯ ಮೊದಲ ಆದ್ಯತೆ ನೀಡಿರುವುದು ಹೃದಯಸ್ಪರ್ಶಿ ಎನಿಸಿದೆ.

Comments are closed.