Hyderabad: ದಂಪತಿ ಚರ್ಚೆ ಯಲ್ಲಿ ಮಗ್ನ; ಮಕ್ಕಳು ಕಾರಿನೊಳಗೆ ಲಾಕ್, ಸಾವು!

Hyderabad: ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ಸೋಮವಾರ 4 ಹಾಗೂ 5 ವರ್ಷದ ಪುಟ್ಟ ಸಹೋದರಿಯರಿಬ್ಬರು ಕಾರೊಳಗೆ ಲಾಕ್ ಆಗಿ ಉಸಿರುಗಟ್ಟಿ ಸಾವಿಗೀಡಾಗಿರುವ ಘಟನೆ ನಡೆದಿದೆ.
ಮೃತ ಸಹೋದರಿಯರನ್ನು ತನು ಶ್ರೀ (4) ಮತ್ತು ಅಭಿನೇತ್ರಿ (5) ಎಂದು ಗುರುತಿಸಲಾಗಿದೆ.
ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಚೆವೆಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ದಮರಗಿರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಮಕ್ಕಳ ಪೋಷಕರು ಮನೆಯಲ್ಲಿ ಸಂಬಂಧಿಕರ ವಿವಾಹದ ಬಗ್ಗೆ ಚರ್ಚಿಸಲು ತಮ್ಮ ಅಜ್ಜಿಯ ಮನೆಗೆ ಬಂದಿದ್ದಾಗ ಈ ಅವಘಡ ನಡೆದಿದೆ. ಮನೆಯಿಂದ ಹೊರ ಬಂದ ಬಾಲಕಿಯರು ಕಾರಿನ ಬಾಗಿಲು ತೆರೆದು ವಾಹನದೊಳಗೆ ಕುಳಿತಿದ್ದಾರೆ. ಇದು ಯಾರ ಗಮನಕ್ಕೂ ಬಂದಿಲ್ಲ.
ಸುಮಾರು ಒಂದು ಗಂಟೆಯವರೆಗೆ ಬಾಲಕಿಯರು ಕಾರಿನೊಳಗೆ ಲಾಕ್ ಆಗಿದ್ದು, ಇಬ್ಬರು ಕೂಡಾ ಉಸಿರುಗಟ್ಟಿ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ಪೋಷಕರು ಬಂದು ನೋಡಿದಾಗ ಮಕ್ಕಳು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು.
ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿದರೂ ಮಕ್ಕಳು ಮೃತರಾಗಿರುವುದಾಗಿ ವೈದ್ಯರು ಘೋಷಣೆ ಮಾಡಿದ್ದಾರೆ.
Comments are closed.