NDA ಕೂಟಕ್ಕೆ ಬಿಗ್ ಶಾಕ್ – ಮೈತ್ರಿ ತೊರೆದ ಪ್ರಬಲ ಪಕ್ಷ!!

NDA ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆಯುವುದರ ಒಳಗಡೆ ಮೈತ್ರಿಕೂಟಕ್ಕೆ ದೊಡ್ಡ ಅಘಾತ ಎದುರಾಗಿದ್ದು, ದಲಿತ ಪಕ್ಷ ರಾಷ್ಟ್ರೀಯ ಲೋಕ ಜನಶಕ್ತಿ ಪಕ್ಷ (ಆರ್‌ಎಲ್‌ಜೆಪಿ) ಅನ್ಯಾಯವನ್ನು ಉಲ್ಲೇಖಿಸಿ ಎನ್‌ಡಿಎ ಮೈತ್ರಿಕೂಟವನ್ನು ತೊರೆದಿದೆ.
ಹೌದು, ಬಿಹಾರ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಎನ್‌ಡಿಎ ಮೈತ್ರಿಕೂಟದಲ್ಲಿ ಬಿರುಕು ಮೂಡಿದೆ. ಎನ್‌ಡಿಎ ತೊರೆಯುವ ನಿರ್ಧಾರದ ಕುರಿತು ರಾಷ್ಟ್ರೀಯ ಲೋಕ ಜನಶಕ್ತಿ ಪಕ್ಷದ ಮುಖ್ಯಸ್ಥ ಪಶುಪತಿ ಕುಮಾರ್ ಪಾರಸ್ ಮಾಹಿತಿ ನೀಡಿದ್ದಾರೆ.
ಈ ಕುರಿತಾಗಿ ಮಾತನಾಡಿರುವ ಅವರು “ನಾವು 2014 ರಿಂದ ಇಲ್ಲಿಯವರೆಗೆ ಎನ್‌ಡಿಎ ಜೊತೆಗಿದ್ದೆವು, ನಾವು ಎನ್‌ಡಿಎಯ ನಿಷ್ಠಾವಂತ ಮಿತ್ರರಾಗಿದ್ದೆವು. ಆದರೆ ಲೋಕಸಭೆ ಚುನಾವಣೆ ನಡೆದಾಗ ಎನ್‌ಡಿಎ ದಲಿತ ಪಕ್ಷವಾದ ನಮ್ಮ ಪಕ್ಷಕ್ಕೆ ಅನ್ಯಾಯ ಮಾಡಿದೆ. ರಾಷ್ಟ್ರೀಯ ಹಿತಾಸಕ್ತಿಯಿಂದ ನಮ್ಮ ಪಕ್ಷವು ಚುನಾವಣೆಯಲ್ಲಿ ಎನ್‌ಡಿಎಗೆ ಬೆಂಬಲ ನೀಡಲು ನಿರ್ಧರಿಸಿತ್ತು. ಬಿಹಾರದಲ್ಲಿ ಎನ್‌ಡಿಎ ಸಭೆ ನಡೆದಾಗ ಬಿಜೆಪಿ ರಾಜ್ಯ ಮುಖ್ಯಸ್ಥರು ಮತ್ತು ಜೆಡಿಯು ರಾಜ್ಯ ಮುಖ್ಯಸ್ಥರು ʼಬಿಹಾರದಲ್ಲಿ ಪಂಚ ಪಾಂಡವರು’ ಎಂದು ಹೇಳಿಕೆಗಳನ್ನು ನೀಡಿದರು. ಅವರು ಎಲ್ಲಿಯೂ ನಮ್ಮ ಪಕ್ಷದ ಹೆಸರನ್ನು ಉಲ್ಲೇಖಿಸಲಿಲ್ಲ” ಎಂದು ಹೇಳಿದರು.
ಅಲ್ಲದೆ “ನಾವು ಜನರ ಮಧ್ಯೆ ಹೋಗುತ್ತಿದ್ದೇವೆ ಮತ್ತು ಸದಸ್ಯತ್ವ ಅಭಿಯಾನವನ್ನು ಪ್ರಾರಂಭಿಸಿದ್ದೇವೆ. ನಾವು ಎಲ್ಲಾ 243 ಸ್ಥಾನಗಳಲ್ಲಿ ಸ್ಪರ್ಧಿಸಲು ತಯಾರಿ ನಡೆಸುತ್ತಿದ್ದೇವೆ. ಮಹಾಘಟಬಂಧನ್ ನಮಗೆ ಸರಿಯಾದ ಸಮಯದಲ್ಲಿ ಸರಿಯಾದ ಗೌರವವನ್ನು ನೀಡಿದರೆ, ಭವಿಷ್ಯದಲ್ಲಿ ನಾವು ಖಂಡಿತವಾಗಿಯೂ ರಾಜಕೀಯದ ಬಗ್ಗೆ ಯೋಚಿಸುತ್ತೇವೆ” ಎಂದು ಹೇಳಿದರು.
Comments are closed.