Viral Video : ವಂಚಿಸಲು ಬಂದ ಸ್ಕ್ಯಾಮರ್‌ಗೆ ಸಖತ್ ಆಗಿ ಚಳ್ಳೆಹಣ್ಣು ತಿನ್ನಿಸಿದ ಯುವತಿ ಯುವತಿ – ವಿಡಿಯೋ ನೋಡಿದ್ರೆ ನೀವು ಬಿದ್ದು ಬಿದ್ದು ನಗ್ತೀರಾ !!

Share the Article

Viral Video : ಹೊಸ ಹೊಸ ತಂತ್ರಗಳೊಂದಿಗೆ ಜನರನ್ನು ಸೈಬರ್‌ ವಂಚಕರು ಮೋಸ ಮಾಡುತ್ತಲೇ ಬಂದಿದ್ದಾರೆ. ಇದೀಗ ಮತ್ತೊಂದು ತಂತ್ರದೊಂದಿಗೆ ಸೈಬರ್‌ ವಂಚಕರು ಜನರನ್ನು ಯಾಮಾರಿಸುತ್ತಿದ್ದು, ಪರಿಚಯಸ್ಥರಂತೆ ತಮ್ಮನ್ನು ಬಿಂಬಿಸಿ ಸೂಕ್ಷ್ಮ ಮಾಹಿತಿಗಳನ್ನು ಪಡೆದು, ವಂಚಿಸುತ್ತಿದ್ದಾರೆ. ಇದೀಗ ಅಂತದ್ದೇ ಒಂದು ಪ್ರಕರಣ ಬೆಳಕಿಗೆ ಬಂದಿದ್ದು, ತನಗೆ ವಂಚಿಸಲು ಬಂದ ಸೈಬರ್ ವಂಚಕನಿಗೆ ಯುವತಿ ಒಬ್ಬಳು ಚಳ್ಳೆ ಹಣ್ಣು ತಿನ್ನಿಸಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿ ನೆಟ್ಟಿಗರು ಬಿದ್ದು ಬಿದ್ದು ನಗುತ್ತಿದ್ದಾರೆ.

ಹೌದು, ತನಗೆ ವಂಚಿಸಲು ಪ್ರಯತ್ನಿಸಿದ ಸ್ಕ್ಯಾಮರ್‌ಗೆ ಸ್ಮಾರ್ಟ್‌ ಯುವತಿಯೊಬ್ಬಳು ಚಳ್ಳೆಹಣ್ಣು ತಿನ್ನಿಸಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ. ಹುಡುಗಿಯ ಬುದ್ಧಿವಂತಿಕೆ ನೋಡಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಘಟನೆಯ ವಿಡಿಯೊವನ್ನು ಯುವತಿ ತನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾಳೆ.

ಅಂದಹಾಗೆ ಈ ವಿಡಿಯೊದಲ್ಲಿ ಯುವತಿ ತನ್ನ ತಂದೆಯ ಸ್ನೇಹಿತ ಎಂದು ಹೇಳಿಕೊಂಡ ವಂಚಕನೊಂದಿಗೆ ಫೋನ್‍ನಲ್ಲಿ ಮಾತನಾಡುತ್ತಿರುವುದನ್ನು ಕಾಣಬಹುದು. ಅವಳಿಗಿದು ಸ್ಕ್ಯಾಮ್‌ ಎಂದು ಗೊತ್ತಾಗಿ ವಂಚಕನೊಂದಿಗೆ ನೈಸಾಗಿ ಮಾತನಾಡಲು ಶುರು ಮಾಡುತ್ತಾಳೆ. ಬಳಿಕ ವಂಚಕನು ಆಕೆಯ ಯುಪಿಐ ಖಾತೆಗೆ ಹಣವನ್ನು ವರ್ಗಾಯಿಸಲು ಆಕೆಯ ತಂದೆ ಹೇಳಿದ್ದಾರೆ ಎಂದು ಹೇಳಿದ್ದಾನೆ. ಅದರಂತೆ ಯುಪಿಐ ಮೂಲಕ 12,000 ರೂ.ಗಳನ್ನು ಕಳುಹಿಸುವುದಾಗಿ ವಂಚಕ ತಿಳಿಸಿದ್ದಾನೆ. ನಂತರ ಆಕೆಯ ಖಾತೆಗೆ 10,000 ರೂ.ಗಳನ್ನು ಕಳುಹಿಸಿದ್ದೇನೆ ಎಂದು ಆಕೆಯ ಫೋನ್‍ಗೆ ಫೇಕ್‍ SMS ಕಳುಹಿಸಿದ್ದಾನೆ.

ಸ್ಕ್ಯಾಮರ್‌ ಕಳುಹಿಸಿದ ಆ ಮೆಸೇಜ್‌ ತನ್ನ ಬ್ಯಾಂಕಿನಿಂದ ಅಲ್ಲ, ವೈಯಕ್ತಿಕ ಸಂಖ್ಯೆಯಿಂದ ಬಂದಿದೆ ಎಂದು ಯುವತಿ ಗಮನಿಸಿದ್ದಾಳೆ. ನಂತರ ಆ ವ್ಯಕ್ತಿ ಆಕೆಗೆ 2,000 ರೂ.ಗಳ ಬದಲು 20,000 ರೂ.ಗಳನ್ನು ತಪ್ಪಾಗಿ ಕಳುಹಿಸಿ, 18,000 ರೂ.ಗಳನ್ನು ಹಿಂದಿರುಗಿಸಲು ಹೇಳಿದ್ದಾನೆ. ಆಗ ಯುವತಿ ನಕಲಿ ಎಸ್‌ಎಂಎಸ್ ಅನ್ನು ಎಡಿಟ್ ಮಾಡಿ ತಾನು 18,000 ರೂ.ಗಳನ್ನು ವಾಪಸ್ ಕಳುಹಿಸಿದ್ದೇನೆ ಎಂದು ಮಸೇಜ್ ಕಳುಹಿಸಿದ್ದಾಳೆ. ಆಗ ವಂಚಕನು ತನ್ನ ಮೋಸ ಆಕೆಗೆ ತಿಳಿಯಿತು ಎಂದುಕೊಂಡು ಕಾಲ್ ಕಟ್ ಮಾಡಿದ್ದಾನೆ.

Comments are closed.