Mangalore: ದೂರು ನೀಡಿದ ದ್ವೇಷ, ಅಂಗಡಿಗೆ ನುಗ್ಗಿ ಬೆಂಕಿ ಹಚ್ಚಿದ ವ್ಯಕ್ತಿ: ಚಿಕಿತ್ಸೆ ಫಲಿಸದೆ ಮಂಗಳೂರಿನ ಆಸ್ಪತ್ರೆಯಲ್ಲಿ ಯುವತಿ ಸಾವು!

Share the Article

Mangalore: ದುಷ್ಕರ್ಮಿಯೋರ್ವ, ಪೊಲೀಸರಿಗೆ ದೂರು ನೀಡಿದ್ದಾಳೆ ಎನ್ನುವ ಕಾರಣಕ್ಜೆ ಯುವತಿಗೆ ಬೆಂಕಿ ಹಚ್ಚಿದ್ದು, ಪರಿಣಾಮ ಗಂಭೀರ ಸುಟ್ಟ ಗಾಯಗಳಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವತಿ ಮೃತಪಟ್ಟ ಘಟನೆ ನಡೆದಿದೆ.

ಬೇಡಡ್ಕದ ರಮಿತಾ (22) ಮೃತಪಟ್ಟ ಯುವತಿ. ಸಮೀಪದ ಪೀಠೋಪಕರಣ ಮಳಿಗೆ ಮಾಲಕ ತಮಿಳುನಾಡು ಮೂಲದ ರಾಮಕೃತ (57) ಎಂಬಾತ ಈ ಕೃತ್ಯ ಎಸಗಿದ್ದನು.

ಬೇಡಡ್ಕ ಮನ್ನಡ್ಕ ಎಂಬಲ್ಲಿ ಅವರು ಅಂಗಡಿ ನಡೆಸುತ್ತಿದ್ದರು.

ಏಪ್ರಿಲ್ 8 ರಂದು ಈ ಘಟನೆ ನಡೆದಿತ್ತು. ಬೇಡಡ್ಕ ಮನ್ನಡ್ಕ ಎಂಬಲ್ಲಿ ಈಕೆ ಅಂಗಡಿ ನಡೆಸುತ್ತಿದ್ದರು. ಪಾನಮತ್ತನಾಗಿ ಕಿರುಕುಳ ನೀಡಿದರ ಕುರಿತು ರಮಿತಾ ಪೊಲೀಸರಿಗೆ ದೂರು ನೀಡಿದ್ದು, ಏ. 8 ರ ಸಂಜೆ 3 ಗಂಟೆಗೆ ರಮಿತಾ ಅಂಗಡಿಯೊಳಗೆ ನುಗ್ಗಿದ ಈತ ಆಕೆಯ ದೇಹಕ್ಕೆ ಟಿನ್ನ‌ರ್ ಸುರಿದು ಬೆಂಕಿ ಹಚ್ಚಿದ್ದನು.

ಪರಿಣಾಮ ಯುವತಿ ಗಂಭೀರ ಸುಟ್ಟ ಗಾಯಗಳಾಗಿದ್ದು, ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಮಿತಾ ಸೋಮವಾರ ರಾತ್ರಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಆ ಬಳಿಕ ಪರಾರಿಯಾಗಲು ಯತ್ನಿಸಿದ್ದ ಆರೋಪಿಯನ್ನು ನಾಗರಿಕರು ಹಿಡಿದು ಪೊಲೀಸರಿಗೊಪ್ಪಿಸಿದ್ದರು.

Comments are closed.