Waqf bill: ಕರ್ನಾಟಕದಲ್ಲಿ ‘ವಕ್ಫ್ ಕಾಯ್ದೆ’ ಜಾರಿ ಮಾಡಲ್ಲ – ಸಚಿವ ಜಮೀರ್ ಹೇಳಿಕೆ

Waqf bill: ಹಲವು ವಿವಾದ ಹಾಗೂ ವಿರೋಧಗಳ ನಡುವೆ ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಮಂಡನೆಯಾಗಿ, ಬಹುಮತಗಳಿಂದ ಅಂಗೀಕಾರ ಕೂಡ ಆಗಿದೆ. ಆದರೆ ಈ ಬೆನ್ನಲ್ಲೇ ಕೆಲವು ರಾಜ್ಯಗಳು ತಾವು ವಕ್ಫ್ ತಿದ್ದುಪಡಿ ಮಸೂದೆಯನ್ನು ರಾಜ್ಯದಲ್ಲಿ ಜಾರಿ ಮಾಡುವುದಿಲ್ಲ ಎಂದು ಘೋಷಿಸಿದೆ. ಇದನ್ನೆಲ್ಲ ಕರ್ನಾಟಕದಲ್ಲೂ ಕೂಡ ವಕ್ಫ್ ಮಸೂದೆಯನ್ನು ಜಾರಿ ಮಾಡಲಾಗುವುದಿಲ್ಲ ಎಂದು ಸಚಿವ ಜಮೀರ್ ಅಹಮದ್ ಖಾನ್ ಘೋಷಣೆ ಮಾಡಿದ್ದಾರೆ.

ಹೌದು, ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಕ್ಫ್ ತಿದ್ದುಪಡಿ ಕಾಯ್ದೆಗೆ ನಮ್ಮ ರಾಜ್ಯ ಸರ್ಕಾರದ ವಿರೋಧವಿದೆ. ರಾಜ್ಯದಲ್ಲಿ ಅದನ್ನು ಅನುಷ್ಠಾನ ಮಾಡುವುದಿಲ್ಲ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ. ಅಲ್ಲದೆ ವಕ್ಫ್ ಕಾಯ್ದೆಯನ್ನು ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಕೇರಳ ಸರ್ಕಾರಗಳು ಜಾರಿಗೊಳಿಸದಿರಲು ನಿರ್ಧರಿಸಿವೆ ಎಂದು ತಿಳಿಸಿದ್ದಾರೆ.

Comments are closed.