Viral Video : ಮಷಿನ್ ಮೇಲೆ ಮಲಗಿಸಿ ಗಗನಸಖಿಯರಿಗೆ ವರ್ಜಿನಿಟಿ ಟೆಸ್ಟ್ ? ವಿಡಿಯೋ ವೈರಲ್

Viral Video : ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗಿದ್ದು ಇದರಲ್ಲಿ ಮಷೀನ್ ಮೇಲೆ ಗಗನಸಖಿಯರನ್ನು ಮಲಗಿಸಿ, ಏನೋ ಟೆಸ್ಟ್ ಮಾಡುತ್ತಿರುವ ರೀತಿ ಕಂಡು ಬಂದಿದೆ. ಈ ವಿಡಿಯೋ ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ.
https://www.instagram.com/reel/DEVW_WxTorH/?igsh=YXppczNtMmN5YXcw
ಹೌದು, ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಮಷೀನ್ ಮೇಲೆ ಗಗನಸಖಿರನ್ನು ಮಲಗಿಸಿ ಅವರ ಕನ್ಯತ್ವವನ್ನು ಪರೀಕ್ಷೆ ಮಾಡಲಾಗುತ್ತದೆ ಎಂದು ಬರೆಯಲಾಗಿದೆ. ಆದರೆ ಇದರ ಅಸಲು ವಿಚಾರವೇ ಬೇರೆ ಇದೆಯಂತೆ. ಅದೇನೆಂದರೆ ವಿಡಿಯೋದಲ್ಲಿ ಇರುವುದು ಗಗನಸಖಿಯರಿಗೆ ವಿಶ್ರಾಂತಿಗಾಗಿ ಇರುವ ಮಷಿನ್ಗಳನ್ನು ಹೇಗೆ ಬಳಸಲಾಗುತ್ತದೆ ಎನ್ನುವುದು.
ಅಂದ ಹಾಗೆ ಅದರ ಪಕ್ಕದಲ್ಲಿಯೇ, ಈ ವಿಡಿಯೋ ಏನು ಎಂಬ ಬಗ್ಗೆ ಸ್ಪಷ್ಟವಾದ ಮಾಹಿತಿ ಇದ್ದರೂ, ನೆಟ್ಟಿಗರು ಆ ಕಡೆ ಗಮನ ನೀಡಿಲ್ಲ. ಏಕೆಂದರೆ ಗೊತ್ತಲ್ಲ! ಎರಡು ಪ್ಯಾರಾಗಳನ್ನೂ ಓದುವಷ್ಟು ಪುರುಸೊತ್ತು ಇಲ್ಲ. ಫೋಟೋದ ಮೇಲೆ ಹಾಕಿರುವ ಕನ್ಯತ್ವ ಪರೀಕ್ಷೆಯನ್ನೇ ನಿಜ ಎಂದುಕೊಂಡು ಮನಸ್ಸಿಗೆ ಬಂದರೆ ಕಮೆಂಟ್ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಈ ವಿಡಿಯೋ ಇಷ್ಟೊಂದು ವೈರಲ್ ಕೂಡ ಆಗಿದೆ.
ಈ ಕ್ಲಿಪ್‌ನಲ್ಲಿ ವಿಮಾನ ಸಿಬ್ಬಂದಿ ಹಾಗೂ ಗಗನಸಖಿಯರಿಗೆ ತರಬೇತಿ ಸಮಯದಲ್ಲಿ ಅವರ ಆಯಾಸ ಪರಿಹಾರಕ್ಕಾಗಿ ಈ ಮಷಿನ್ ಬಳಸಲಾಗುತ್ತದೆ. ಇದು ಗುರುತ್ವಾಕರ್ಷಣ ಖುರ್ಚಿಯಾಗಿದೆ. ಈ ಖುರ್ಚಿಯ ಮೇಲೆ ಸಿಬ್ಬಂದಿಯನ್ನು ಮಲಗಿಸಲಾಗುತ್ತದೆ. ಇದರಿಂದ ಹಲವಾರು ಪ್ರಯೋಜನಗಳು ಇವೆ. ಅವುಗಳಲ್ಲಿ ಮುಖ್ಯವಾದದ್ದು, ಸ್ನಾಯು ಒತ್ತಡವನ್ನು ನಿವಾರಿಸುವುದು- ಗುರುತ್ವಾಕರ್ಷಣೆಯ ಖುರ್ಚಿಗಳಲ್ಲಿ ಕಾಲುಗಳು ಮತ್ತು ಎದೆಯ ಬೆಂಬಲದೊಂದಿಗೆ ಮುಂದಕ್ಕೆ ಹೋಗಬಹುದಾಗಿದೆ. ಇದು ಸ್ನಾಯುಗಳ ಒತ್ತಡವನ್ನು ನಿವಾರಿಸುತ್ತದೆ ಮತ್ತು ಆಯಾಸವನ್ನು ಕಡಿಮೆ ಮಾಡುತ್ತದೆ. ಇದು ದೀರ್ಘಕಾಲದವರೆಗೆ ನಿಂತು ಅಥವಾ ಚಲಿಸುವ ಸಿಬ್ಬಂದಿ ಸದಸ್ಯರಿಗೆ ವಿಶೇಷವಾಗಿ ಉಪಯುಕ್ತವಾಗಿದೆ. ಇನ್ನೊಂದು, ಗಗನಸಖಿಯರಿಗೆ ಉತ್ತಮ ಭಂಗಿ ಮತ್ತು ಕೋರ್ ಬಲಪಡಿಸಿಕೊಳ್ಳುವುದು ಅತ್ಯಗತ್ಯ. ಇದನ್ನು ಈ ಸಾಧನ ಮಾಡುತ್ತದೆ. ಸುದೀರ್ಘ ಪ್ರಯಾಣಿಸುವ ಸಮಯದಲ್ಲಿ ಸಿಬ್ಬಂದಿಗೆ ಈ ಖುರ್ಚಿಗಳು ಅವರ ರಕ್ತ ಪರಿಚಲನೆ ಸುಧಾರಿಸಲು ಮತ್ತು ಬೆನ್ನಿನ ಒತ್ತಡವನ್ನು ನಿವಾರಿಸಲು ಸಹಕಾರಿಯಾಗಿದೆ.
Comments are closed.