Tirupati: ತಿಮ್ಮಪ್ಪನಿಗೆ ಮುಡಿ ಕೊಟ್ಟ ಪವರ್ ಸ್ಟಾರ್ ಪತ್ನಿ!!

Tirupati : ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಪತ್ನಿ ಅನ್ನಾ ಕೊನಿಡೇಲಾ ಅವರು ಭಾನುವಾರ ತಿರುಮಲ ದೇವಸ್ಥಾನದಲ್ಲಿ ಮುಡಿ ಅರ್ಪಿಸಿದ್ದಾರೆ.
ಯಸ್,ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ, ಟಾಲಿವುಡ್ ನಟ ಪವನ್ ಕಲ್ಯಾಣ್ ಪತ್ನಿ ಅನ್ನಾ ಲೆಜ್ನೆವಾ (Anna Lezhneva) ಅವರು ತಿರುಪತಿಯಲ್ಲಿ ಮುಡಿಕೊಟ್ಟಿದ್ದಾರೆ. ಕೆಲವೇ ದಿನಗಳ ಹಿಂದೆ ಅವರ ಪುತ್ರ ಮಾರ್ಕ್ ಶಂಕರ್ (Mark Shankar) ಸಿಂಗಾಪುರದಲ್ಲಿ ಅಗ್ನಿ ಅವಘಡದಿಂದ ಪಾರಾಗಿದ್ದ. ಈ ಹಿನ್ನೆಲೆಯಲ್ಲಿ ಅವರು ತಿರುಪತಿ ದೇವಸ್ಥಾನಕ್ಕೆ ಮುಡಿಯನ್ನು ನೀಡಿದ್ದಾರೆ.
ಅಂದಹಾಗೆ ಪವನ್ ಕಲ್ಯಾಣ್ ಅವರ ಮಗ ಮಾರ್ಕ್ ಶಂಕರ್ ಇತ್ತೀಚೆಗೆ ಸಿಂಗಾಪುರದಲ್ಲಿ ಬೇಸಿಗೆ ಶಿಬಿರದಲ್ಲಿ ಭಾಗವಹಿಸುತ್ತಿದ್ದಾಗ ಬೆಂಕಿ ಅವಘಡದಲ್ಲಿ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಏಪ್ರಿಲ್ 8 ರಂದು ಸಂಭವಿಸಿದ ಅಗ್ನಿ ಅವಘಡದಲ್ಲಿ ಶಂಕರ್ ಅವರ ಕೈ ಮತ್ತು ಕಾಲುಗಳಿಗೆ ಸುಟ್ಟ ಗಾಯಗಳಾಗಿವೆ.
ಶಂಕರ್ ಅವರನ್ನು ಉಳಿಸಿದ್ದಕ್ಕಾಗಿ ದೇವರಿಗೆ ಕೃತಜ್ಞತೆಯ ಸಂಕೇತವಾಗಿ, ಅನ್ನಾ ಕೊನಿಡೇಲಾ ತನ್ನ ತಲೆ ಕೂದಲನ್ನು ಅರ್ಪಿಸಿದರು. ಸಂಪ್ರದಾಯಕ್ಕೆ ಅನುಗುಣವಾಗಿ, ಪದ್ಮಾವತಿ ಕಲ್ಯಾಣ ಕಟ್ಟೆಯಲ್ಲಿ ತನ್ನ ಕೂದಲನ್ನು ಅರ್ಪಿಸಿ, ಧಾರ್ಮಿಕ ಆಚರಣೆಗಳಲ್ಲಿ ಭಾಗವಹಿಸಿದ್ದರು ಎಂದು ಜನಸೇನಾ ಪಕ್ಷದ ಪತ್ರಿಕಾ ಪ್ರಕಟಣೆ ತಿಳಿಸಿದೆ.
ರಷ್ಯಾದ ಆರ್ಥೊಡಾಕ್ಸ್ ಕ್ರಿಶ್ಚಿಯನ್ ಆಗಿರುವ ಅನ್ನಾ, ಗಾಯತ್ರಿ ಸದನದಲ್ಲಿ ದೇವಾಲಯದ ಅಧಿಕಾರಿಗಳ ಸಮ್ಮುಖದಲ್ಲಿ ಘೋಷಣೆ ನಮೂನೆಗಳಿಗೆ ಸಹಿ ಹಾಕಿದರು, ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ) ನಿಯಮಗಳ ಪ್ರಕಾರ, ವೆಂಕಟೇಶ್ವರನ ಭೇಟಿ ಮತ್ತು ಆಚರಣೆಗಳಲ್ಲಿ ಭಾಗವಹಿಸುವ ಮೊದಲು ಭಗವಾನ್ ವೆಂಕಟೇಶ್ವರನ ಮೇಲಿನ ತನ್ನ ನಂಬಿಕೆಯನ್ನು ದೃಢಪಡಿಸಿದ್ದಾರೆ.
Comments are closed.