Viral Video : ಆಜಾನ್ ಕೂಗಿ ಮೈಕ್ ಆಫ್ ಮಾಡುವುದನ್ನು ಮರೆತ ಮೌಲ್ವಿ – ರಾತ್ರಿ ಕೇಳಿದ ಧ್ವನಿಗೆ ಜನರೆಲ್ಲಾ ಶಾಕ್, ವಿಡಿಯೋ ನೋಡಿದ್ರೆ ನೀವು ಕೂಡ ಶೇಕ್

Viral Video : ಮಸೀದಿಯಲ್ಲಿ ರಾತ್ರಿಯ ಅಜಾನ್ ಬಳಿಕ ಮೌಲ್ವಿ ಮೈಕ್ ಆಫ್ ಮಾಡೋದನ್ನು ಮರೆತಿದ್ದು, ಬಳಿಕ ಈ ಒಂದು ತಪ್ಪಿನಿಂದ ರಾತ್ರಿ ಮಸೀದಿಯ ಮೈಕ್‌ನಿಂದ ಕೇಳಿದ ಧ್ವನಿಗೆ ಜನರು ಒಂದು ಕ್ಷಣ ಭಯಪಟ್ಟಿಕೊಂಡ ಘಟನೆ ನಡೆದಿದೆ.

ಮಸೀದಿಗಳಲ್ಲಿ ಐದು ಬಾರಿ ಅಜಾನ್ ಮಾಡಲಾಗುತ್ತದೆ. ಈ ಅಜಾನ್‌ಗೆ ಸಂಬಂಧಿಸಿದಂತೆ ಸಾಕಷ್ಟು ವಿವಾದವೂ ಸುತ್ತಿಕೊಂಡಿದೆ. ಅಜಾನ್ ಮೊಳಗಿಸುವ ಧ್ವನಿಯ ತೀವ್ರತೆ ಎಷ್ಟಿರಬೇಕು ಎಂಬುದರ ಬಗ್ಗೆಯೂ ಕೆಲವು ನಿಯಮಗಳಿವೆ. ಅಜಾನ್ ನೀಡಿದ ಬಳಿಕ ಧ್ವನಿವರ್ಧಕದ ಬಟನ್ ಆಫ್ ಮಾಡಲಾಗುತ್ತದೆ. ಆದರೆ ಇಲ್ಲೊಂದು ಮಸೀದಿಯಲ್ಲಿ ರಾತ್ರಿಯ ಅಜಾನ್ ಬಳಿಕ ಮೌಲ್ವಿ ಮೈಕ್ ಆಫ್ ಮಾಡೋದನ್ನು ಮರೆತಿದ್ದು, ಬಳಿಕ ರಾತ್ರಿ ಕೇಳಿದ ಧ್ವನಿಗೆ ಜನರೆಲ್ಲಾ ಶಾಕ್ ಆಗಿದ್ದಾರೆ.

ವೈರಲ್ ವಿಡಿಯೋದಲ್ಲಿ ಏನಿದೆ?
ಈ ವಿಡಿಯೋದಲ್ಲಿ ರಾತ್ರಿ ಜನವಸತಿ ಪ್ರದೇಶದ ದೃಶ್ಯವನ್ನು ನೋಡಬಹುದು. ಬ್ಯಾಕ್‌ಗ್ರೌಂಡ್‌ನಲ್ಲಿ ನಿಮಗೆ ಕರ್ಕಶವಾದ ಧ್ವನಿಯೊಂದು ಕೇಳಿಸುತ್ತದೆ. ಒಂದು ಕ್ಷಣ ಕಿವಿಗಳನ್ನು ಮುಚ್ಚಿಕೊಳ್ಳುವಷ್ಟು ಆ ಧ್ವನಿ ಕರ್ಕಶವಾಗಿರುತ್ತದೆ. ಒಂದು ಕ್ಷಣ ಅದು ಗೊರಕೆಯ ಸದ್ದು ಎಂದು ಗೊತ್ತಾಗುತ್ತದೆ. ಮಸೀದಿಯ ಮೈಕ್ ಆಪ್ ಮಾಡದಿರೋ ಕಾರಣ, ರಾತ್ರಿ ಅಲ್ಲಿ ಮಲಗಿರೋರ ಗೊರಕೆ ಸದ್ದು ಮೈಕ್ ಮೂಲಕ ಎಲ್ಲರಿಗೂ ಕೇಳಿಸಿದೆ. ಸದ್ಯ ಈ ವಿಡಿಯೋ ವೇಗವಾಗಿ ವೈರಲ್ ಆಗುತ್ತಿದೆ. ಕೆಲವರು ಇದು ಹಳೆಯ ವಿಡಿಯೋ ಅಂತಾನೂ ಕಮೆಂಟ್ ಹಾಕಿದ್ದಾರೆ.

ಈ ವಿಡಿಯೋವನ್ನು ಅರ್ನೊಲ್ಡ್ ಶಲ್ವಾರ್ ನಿಕ್ಕರ್ (@Calakand) ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇದುವರೆಗೂ ಈ ವಿಡಿಯೋ 4.3 ಸಾವಿರ ಲೈಕ್ಸ್, 300ಕ್ಕೂ ಅಧಿಕ ಕಮೆಂಟ್‌ಗಳನ್ನು ಪಡೆದುಕೊಂಡಿದೆ. ಈ ವಿಡಿಯೋ ಪೋಸ್ಟ್‌ನ್ನು 1 ಸಾವಿರಕ್ಕೂ ಅಧಿಕ ಬಾರಿ ರೀಟ್ವೀಟ್ ಆಗಿದೆ.

Comments are closed.