Kambala: ಮೈಸೂರು ದಸರಾ ಕ್ರೀಡಾಕೂಟದಲ್ಲಿ ಕಂಬಳ ಸ್ಪರ್ಧೆ: ಡಿಕೆ ಶಿವಕುಮಾರ್ ಘೋಷಣೆ!

Kambala: ಮುಂದಿನ ವರ್ಷದಿಂದಲೇ ಮೈಸೂರು ದಸರಾ ಕ್ರೀಡಾಕೂಟದಲ್ಲಿ ಕಂಬಳ (Kambala) ಸ್ಪರ್ಧೆ ಆಯೋಜನೆ ಮಾಡುವುದಾಗಿ ಡಿಸಿಎಂ ಡಿಕೆ ಶಿವಕುಮಾರ್ ಘೋಷಣೆ ಮಾಡಿದ್ದಾರೆ.
ಮಂಗಳೂರು ನಗರದ ಗುರುಪುರ ಕಂಬಳದಲ್ಲಿ ಭಾಗಿಯಾಗಿ ಮಾತನಾಡಿದ ಡಿಕೆ ಶಿವಕುಮಾರ್ ಅವರು, ಮೈಸೂರು ಜಿಲ್ಲಾ ಸಚಿವರ ಜೊತೆಗೆ ಮಾತುಕತೆ ನಡೆಸುತ್ತೇನೆ. ದಸರಾ ಕ್ರೀಡಾಕೂಟದಲ್ಲಿ ಪ್ರತಿವರ್ಷ ಕಂಬಳ ನಡೆಯಬೇಕು. 3 ಎಕರೆ ಜಾಗವನ್ನು ನಿಗದಿಪಡಿಸಿ ಶಾಶ್ವತ ಕಂಬಳ ಕೆರೆ ನಿರ್ಮಿಸಬೇಕು. ಇದಕ್ಕಾಗಿ ಅನುದಾನ ತೆಗೆದಿಡಲು ವ್ಯವಸ್ಥೆ ಮಾಡಿಸುತ್ತೇನೆ. ಕಂಬಳ ಅಂತಾರಾಷ್ಟ್ರೀಯ ಕ್ರೀಡೆಯಾಗಿ ಬೆಳೆಯಬೇಕು ಎಂದು ಹೇಳಿದ್ದಾರೆ.
Comments are closed.