Caste census: ಕರ್ನಾಟಕದ ಜಾತಿಗಣತಿ ಅಂಕಿ-ಅಂಶ ರಿವಿಲ್ !! ಯಾವ ಜಾತಿಯವರು ಎಷ್ಟೆಷ್ಟು ಜನ ಇದ್ದಾರೆ?

Caste census: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಲ್ಲಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2015ರ (ಜಾತಿ ಗಣತಿ) ದತ್ತಾಂಶಗಳ ಅಧ್ಯಯನ ವರದಿಯನ್ನು ನಿನ್ನೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟದಲ್ಲಿ ಮಂಡನೆಯಾಗಿದೆ.

ರಾಜ್ಯದಲ್ಲಿ ರಾಜಕೀಯ ಮತ್ತು ಸಾಮಾಜಿಕ ಸ್ಥಿತ್ಯಂತರಕ್ಕೆ ಕಾರಣವಾಗುವ ನಿರೀಕ್ಷೆಯೊಂದಿಗೆ ವ್ಯಾಪಕ ಚರ್ಚೆ ಹಾಗೂ ತೀವ್ರ ವಿವಾದಕ್ಕೆ ಗುರಿಯಾಗಿದ್ದ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ -2015 (ಜಾತಿ ಗಣತಿ) ಶುಕ್ರವಾರ ಸಚಿವ ಸಂಪುಟ ಸಭೆಯಲ್ಲಿಮಂಡನೆಯಾಗಿದೆ. ಮುಂದಿನ ಗುರುವಾರ (ಏ.17) ವರದಿ ಬಗ್ಗೆ ಸಮಗ್ರ ಚರ್ಚೆ ನಡೆಸಿ ನಿರ್ಧಾರಕ್ಕೆ ಬರಲು ಕ್ಯಾಬಿನೆಟ್‌ ನಿರ್ಣಯಿಸಿದೆ

ಇನ್ನು ಈ ಬೆನ್ನಲ್ಲೇ ಜಾತಿ ಗಣತಿ ವರದಿಯಲ್ಲಿ ಯಾವ್ಯಾವ ಜಾತಿಯ ಜನರು ರಾಜ್ಯದಲ್ಲಿ ಎಷ್ಟಿದ್ದಾರೆ ಎಂಬುವುದರ ಬಗ್ಗೆ ಕೆಲ ನಿಖರ ಅಂಕಿಶಗಳು ಎನ್ನಲಾದ ಮಾಹಿತಿ ರಿವೀಲ್ ಆಗಿದೆ. ಹಾಗಿದ್ರೆ ಯಾವ ಜಾತಿಯ ಜನಸಂಖ್ಯೆ ಎಷ್ಟು ಇದೆ ಎಂಬುದಾಗಿ ಎಲ್ಲಿದೆ ಡಿಟೇಲ್ಸ್.

ರಾಜ್ಯದಲ್ಲಿ ನಗರ ಪ್ರದೇಶದಲ್ಲಿ ಒಟ್ಟು 2,04,02,006, ಗ್ರಾಮೀಣದಲ್ಲಿ 3,94,12,936 ಸೇರಿದಂತೆ ಒಟ್ಟು 5,98,14,942 ಜಾತಿಗಣತಿ ಸಂಖ್ಯೆ ಇದೆ ಎಂದು ತಿಳಿದುಬಂದಿದೆ.
ಆ ಪೈಕಿ ವೀರಶೈವ ಲಿಂಗಾಯತ ಜನಸಂಖ್ಯೆ ಒಟ್ಟು 66,35,233, ಒಕ್ಕಲಿಗ ಸಮುದಾಯ 61,68,652, ಕುರುಬ ಸಮುದಾಯ 43,72,847, SC 1,09,29,347, ST 42,81,289, ಮುಸ್ಲಿಂ 76,99,425, ಬ್ರಾಹ್ಮಣ 15,64,741 ಸಂಖ್ಯೆ ಇದೆ ಎಂದು ವರದಿಯಾಗಿದೆ.

Comments are closed.