Mysore : ‘ಗೃಹಲಕ್ಷ್ಮಿ ದುಡ್ಡಿಂದ ಪೆಟ್ರೋಲ್, ಇಸ್ಪೀಟ್ ಮಾರಾಟ ಮಾಡ್ತೀನಿ’ – ಮಹಿಳೆ ಮಾತು ಕೇಳಿ ಶಾಸಕರೇ ಶಾಕ್

Mysore : ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಗೃಹಲಕ್ಷ್ಮಿ ಯೋಜನೆಯಿಂದ ಅನೇಕ ಮಹಿಳೆಯರು ಬದುಕನ್ನು ಕಟ್ಟಿಕೊಂಡಿದ್ದಾರೆ. ಕೆಲವು ಮಹಿಳೆಯರು ಈ ಹಣವನ್ನು ಕೂಡಿಟ್ಟು ತಮ್ಮ ಜೀವನಕ್ಕೆ ಒಂದು ಅಡಿಪಾಯವನ್ನು ಕಂಡುಕೊಂಡಿದ್ದಾರೆ. ಮಹಿಳೆಯರ ಈ ನಡೆಯನ್ನು ಕಂಡು ಸರ್ಕಾರವು ತುಂಬಾ ಹೆಮ್ಮೆಪಟ್ಟಿದೆ. ಅಂತೆಯೇ ಇದೀಗ ಇಲ್ಲೊಬ್ಬರು ಮಹಿಳೆ ಗೃಹಲಕ್ಷ್ಮಿ ಯೋಜನೆಯಿಂದ ತಮಗಾದ ಪ್ರಯೋಜನವನ್ನು ಹೇಳಿಕೊಂಡಿದ್ದು ಇದನ್ನು ಕೇಳಿ ಶಾಸಕರೇ ಶಾಕ್ ಆಗಿದ್ದಾರೆ.
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಗ್ರಾಮದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ತಾಲ್ಲೂಕು ಸಮಿತಿ ಶಾಸಕ ದರ್ಶನ್ ಧ್ರುವನಾರಾಯಣ್ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು, ಈ ಸಭೆಯಲ್ಲಿ ಮಹಿಳೆಯೊಬ್ಬರು ಗೃಹಲಕ್ಷ್ಮೀ ಯಿಂದ ತಮ್ಮ ಜೀವನ ಕಟ್ಟಿಕೊಟ್ಟ ಬಗ್ಗೆ ಹೇಳಿದ್ದು, ಗೃಹಲಕ್ಷ್ಮಿ ಯೋಜನೆ ಹಣದಿಂದ ಪೆಟ್ರೋಲ್ ಮತ್ತು ಇಸ್ಪೀಟ್ ಕಾರ್ಡ್ ಮಾರಾಟ ಮಾಡ್ತಿದ್ದಿನಿ ಎಂದು ಹೇಳಿದ್ದಾರೆ. ಇದನ್ನು ಕೇಳಿ ಶಾಸಕ ದರ್ಶನ್ ಅವರು ಶಾಕ್ ಆಗಿದ್ದಾರೆ.
Comments are closed.