Delhi: ಉಗ್ರ ತಹವ್ವೂರ್ ರಾಣಾನನ್ನು ಭಾರತಕ್ಕೆ ಕರೆತರಲು ಸರ್ಕಾರ ಖರ್ಚು ಮಾಡಿದ್ದೆಷ್ಟು ? ಗೊತ್ತಾದ್ರೆ ಶಾಕ್ ಆಗೋದು ಪಕ್ಕ

Delhi: ವಾಣಿಜ್ಯನಗರಿ ಮುಂಬೈ ಮೇಲೆ 2008ರ ಮುಂಬೈ ದಾಳಿಯ ಮಾಸ್ಟರ್‌ಮೈಂಡ್ ತಹವ್ವೂರ್ ರಾಣಾನನ್ನ (Tahawwur Rana) ಕೊನೆಗೂ ಭಾರತಕ್ಕೆ ಕರೆತರಲಾಗಿದೆ. ದೆಹಲಿಯ ಪಾಲಂ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಎನ್‌ಐಎ ಆತನನ್ನು ಬಂಧಿಸಿದೆ. ಸದ್ಯಕ್ಕೆ ಈತನಿಗೆ ನ್ಯಾಯಾಲಯವು 18 ದಿನಗಳ ಕಾಲ ಎನ್‌ಐಎ ಕಸ್ಟಡಿಗೆ ನೀಡಿದೆ. ಇನ್ನು ತಹವ್ವೂರ್ ರಾಣಾನನ್ನು ಭಾರತಕ್ಕೆ ಮರಳಿ ಕರೆತರಲು ಸರ್ಕಾರ ಎಷ್ಟು ಹಣವನ್ನು ಖರ್ಚು ಮಾಡಿದೆ ಗೊತ್ತಾ? ಗೊತ್ತಾದ್ರೆ ನೀವೇ ಶಾಕ್ ಆಗುತ್ತೀರಿ.
ಸರ್ಕಾರ ಖರ್ಚು ಮಾಡಿದ್ದೆಷ್ಟು..?
ವರದಿಗಳ ಪ್ರಕಾರ, ಉಗ್ರ ರಾಣಾನನ್ನು ಭಾರತಕ್ಕೆ ಕರೆತೆರಲು ಗಲ್ಫ್ ಜಿ-550 ಐಷರಾಮಿ ಚಾರ್ಟರ್ ವಿಮಾನವನ್ನು ಬಳಸಲಾಗಿದೆ.ಇದರ ಬೆಲೆ ಗಂಟೆಗೆ 9 ಲಕ್ಷ ರೂ. ಈ ಚಾರ್ಟರ್ ವಿಮಾನವನ್ನು ಇತನನ್ನು ಕರೆತರುವ ಸಲುವಾಗಿ ಬಾಡಿಗೆ ಪಡೆಯಲಾಗಿದೆ.
ಈ ವಿಮಾನದಲ್ಲಿ ಅಮೆರಿಕದ ಮಿಯಾಮಿಯಿಂದ ಭಾರತಕ್ಕೆ ಕರೆತರಲಾಯಿತು. ವಿಮಾನವು ಬುಧವಾರ (ಸ್ಥಳೀಯ ಸಮಯ) ಬೆಳಗಿನ ಜಾವ 2:15 ರ ಸುಮಾರಿಗೆ ಮಿಯಾಮಿಯಿಂದ ಹೊರಟು ಅದೇ ದಿನ ಸಂಜೆ 7 ಗಂಟೆ ಸುಮಾರಿಗೆ ರೊಮೇನಿಯನ್ ರಾಜಧಾನಿ ಬುಕಾರೆಸ್ಟ್ ತಲುಪಿತು. ಇಲ್ಲಿ ವಿಮಾನಕ್ಕೆ ಸುಮಾರು 11 ಗಂಟೆಗಳ ವಿರಾಮ ನೀಡಲಾಯಿತು ಮತ್ತು ಮರುದಿನ ಗುರುವಾರ, ಅದು ಟೇಕ್ ಆಫ್ ಆಗಿ ಸಂಜೆ 6:22 ರ ಸುಮಾರಿಗೆ ದೆಹಲಿಯ ಪಾಲಂ ವಿಮಾನ ನಿಲ್ದಾಣದಲ್ಲಿ ಇಳಿದಿದೆ.
ಈ ಸಂಪೂರ್ಣ ಸಮಯ ಪೂರ್ಣಗೊಳಿಸಲು ಬರೊಬ್ಬರಿ 40 ಗಂಟೆಗಳ ಸಮಯ ಹಿಡಿದಿದೆ. ಈ ಗಂಟೆಗಳ ಪ್ರಕಾರ ಉಗ್ರ ರಾಣಾನನ್ನು ಭಾರತಕ್ಕೆ ಕರೆತರಲು ವಿಮಾನವೆಚ್ಚ ಮಾತ್ರವೇ 4 ಕೋಟಿ ರೂ. ಅಧಿಕ ಖರ್ಚಾಗಿದೆ ಎಂದು ವರದಿ ಉಲ್ಲೇಖಿಸಿವೆ. ಅಲ್ಲದೆ, ಯಾರಾದರೂ ಮಿಯಾಮಿಯಿಂದ ದೆಹಲಿಗೆ ಸಾಮಾನ್ಯ ಬಿಸಿನೆಸ್ ಕ್ಲಾಸ್ ಟಿಕೆಟ್ ಬುಕ್ ಮಾಡಿದರೆ, ಅದಕ್ಕೆ 4 ಲಕ್ಷ ರೂ. ವೆಚ್ಚವಾಗುತ್ತದೆ. ಈ ರೀತಿ ನೋಡಿದರೆ, ತಹವ್ವೂರ್ ಅನ್ನು ಮರಳಿ ತರಲು ಭಾರತ ಸರ್ಕಾರ 100 ಪಟ್ಟು ಹೆಚ್ಚು ಹಣವನ್ನು ಖರ್ಚು ಮಾಡಿದೆ.
Comments are closed.