America : ಒಂದು ಗಂಟೆ ಸಂಭೋಗಕೆ 50,000 ಚಾರ್ಜ್ – ಅಮೆರಿಕದಲ್ಲಿ ಭಾರತೀಯ ಮೂಲದ ‘ಹೆಣ್ಣುಬಾಕ’ ಅರೆಸ್ಟ್

America : ಅಮೆರಿಕದ ಬೋಸ್ಟನ್ ನಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆಯ ಮೇಲೆ ದಾಳಿ ನಡೆಸಲಾಗಿದ್ದು, ಅದರಲ್ಲಿ ಭಾರತ ಮೂಲದ ಉದ್ಯಮಿಯೊಬ್ಬರು ಸಿಕ್ಕಿಹಾಕಿಕೊಂಡಿರುವ ಘಟನೆ ವರದಿಯಾಗಿದೆ.

ಹೌದು, ಹೈಟೆಕ್‌ ವೇಶ್ಯಾವಾಟಿಕೆ ಅಡ್ಡೆಗೆ ತೆರಳಿದ್ದ ಆರೋಪದಲ್ಲಿ ಗ್ರೇಡಿಯಂಟ್ (Gradiant) ಕ್ಲೀನ್ ವಾಟರ್ ಸೊಲ್ಯೂಷನ್ ಸ್ಟಾರ್ಟ್‌ಅಪ್‌ನ ಸಿಇಒ ಅನುರಾಗ್ ಬಾಜಪೇಯಿನನ್ನು ಅಮೆರಿಕದಲ್ಲಿ ಬಂದಿಸಲಾಗಿದೆ. ಅವರು ಒಂದು ಗಂಟೆ ಲೈಂಗಿಕ ಕ್ರಿಯೆ ನಡೆಸಲು ಸುಮಾರು 50,000 ಪಾವತಿಸಿದ್ದರು ಎನ್ನಲಾಗಿದೆ. ಜೊತೆಗೆ ಅವರೊಂದಿಗೆ ಅನೇಕ ಪುರುಷರು ಕೂಡ ಇದ್ದರು ಎಂಬುದಾಗಿ ವರದಿಗಳು ಹೇಳಿವೆ.

ಅಂದಹಾಗೆ ಹಾರ್ವರ್ಡ್ ವಿಶ್ವವಿದ್ಯಾಲಯದ ಬಳಿ ದುಬಾರಿ ಅಪಾರ್ಟ್‌ಮೆಂಟ್‌ಗಳಲ್ಲಿ ನಡೆಯುತ್ತಿತ್ತು ಎನ್ನಲಾದ ಹೈಟೆಕ್‌ ವೇಶ್ಯಾವಾಟಿಕೆಯಲ್ಲಿ ಭಾರತೀಯ-ಅಮೇರಿಕನ್ ಸಿಇಒ ಮತ್ತು ಶತಕೋಟಿ ಡಾಲರ್ ಮೌಲ್ಯದ ವಾಟರ್ ಟೆಕ್ ಸಂಸ್ಥೆ ಗ್ರೇಡಿಯಂಟ್‌ನ ಸಹ-ಸಂಸ್ಥಾಪಕ ಅನುರಾಗ್ ಬಾಜಪೇಯಿ ಭಾಗಿಯಾಗಿರುವುದು ಉನ್ನತ ಮಟ್ಟದ ತನಿಖೆಯಲ್ಲಿ ಬಹಿರಂಗವಾಗಿದೆ. ಈ ವೇಶ್ಯಾವಾಟಿಕೆ ಜಾಲವು ವೈದ್ಯರು, ವಕೀಲರು, ಕಾರ್ಪೊರೇಟ್ ಕಾರ್ಯನಿರ್ವಾಹಕರು ಮತ್ತು ಸಾರ್ವಜನಿಕ ಅಧಿಕಾರಿಗಳ ಕಕ್ಷಿದಾರರಿಗೆ ಸೇವೆ ನೀಡುತ್ತಿತ್ತು ಎಂದು ತಿಳಿದುಬಂದಿದೆ.

ಈಗಾಗಲೇ ತಿಳಿಸಿದಂತೆ, ಅನುರಾಗ್ ಅವರು ಗ್ರೇಡಿಯೆಂಟ್ ಮಿನರಲ್ ಕಂಪನಿಯ ಸಿಇಒ. ಇವರು ಉನ್ನತ ಶಿಕ್ಷಣ ಪಡೆದಿದ್ದೆಲ್ಲವೂ ಅಮೆರಿಕದಲ್ಲೇ. ಎಂಐಟಿಯಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಪಿಎಚ್ ಡಿ ಪಡೆದಿರುವ ಇವರು, ಎಂಐಟಿಯಲ್ಲೇ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದರು. ಅಲ್ಲದೆ, ಮಿಸೌರಿ ವಿಶ್ವವಿದ್ಯಾಲಯದಲ್ಲಿಯೂ ಸಂಶೋಧನೆ ನಡೆಸುತ್ತಿದ್ದರು. ಈಗ ಹೈಟೆಕ್ ವೇಶ್ಯಾವಾಟಿಕೆಯ ಜಾಲದಲ್ಲಿ ಅವರ ಬಂಧನವಾಗಿರುವುದರಿಂದ ಗ್ರೇಡಿಯೆಂಟ್ ಕಂಪನಿಯಿಂದ ಅನುರಾಗ್ ಅವರನ್ನು ಕಿತ್ತೊಗೆಯಬೇಕು ಎಂಬ ಆಗ್ರಹಗಳು ಕೇಳಿಬಂದಿವೆ. ಕಂಪನಿಯ ಆಡಳಿತ ಮಂಡಳಿಯಲ್ಲಿ ಅನುರಾಗ್ ಅವರನ್ನು ಕಿತ್ತೊಗೆಯಲು ಒತ್ತಡ ಹೆಚ್ಚಾಗುತ್ತಿದೆ

Comments are closed.