Viral Video : ಗರ್ಲ್ ಫ್ರೆಂಡ್ ಅನ್ನು ಸೂಟ್‌ಕೇಸ್‌ನಲ್ಲಿ ಕೂರಿಸಿ ಬಾಯ್ಸ್ ಹಾಸ್ಟೆಲಿಗೆ ಕರೆ ತಂದ ಹುಡುಗ !! ಗೊತ್ತಾಗಿದ್ದು ಹೇಗೆ ? ಇಲ್ಲಿದೆ ವಿಡಿಯೋ

Viral Video : ತನ್ನ ಪ್ರೇಯಸಿಯನ್ನು ಹುಡುಗನೊಬ್ಬ ಸೂಟ್ಕೇಸ್ ಒಳಗೆ ಕೂರಿಸಿಕೊಂಡು ಬಾಯ್ಸ್ ಹಾಸ್ಟೆಲ್ ಗೆ ಕರೆದುಕೊಂಡು ಬಂದ ವಿಚಿತ್ರ ಪ್ರಕರಣ ಒಂದು ಹರಿಯಾಣದ ವಿಶ್ವವಿದ್ಯಾನಿಲಯದಲ್ಲಿ ನಡೆದಿದೆ. ಈ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬೈರಲ್ ಆಗುತ್ತಿದೆ.

ಹೌದು, ಸೋನಿಪತ್‌ನಲ್ಲಿರುವ ಖಾಸಗಿ ವಿಶ್ವವಿದ್ಯಾಲಯದ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿ ತನ್ನ ಹಾಸ್ಟೆಲ್ ಗೆ ತನ್ನ ಗೆಳತಿಯನ್ನು ಯಾರಿಗೂ ಗೊತ್ತಾಗದ ರೀತಿಯಲ್ಲಿ ಕರೆದುಕೊಂಡು ಬರುವ ಪ್ಲಾನ್ ಮಾಡಿದ್ದಾನೆ. ಅದರಂತೆ ದೊಡ್ಡ ಸೂಟ್‌ಕೇಸ್‌ ಒಳಗೆ ಗೆಳತಿಯನ್ನು ಕೂರಿಸಿ ಹಾಸ್ಟೆಲ್ ಗೆ ಕರೆದುಕೊಂಡು ಬಂದಿದ್ದಾನೆ. ಈ ವೇಳೆ ಹಾಸ್ಟೆಲ್ ಸಿಬ್ಬಂದಿ ಬಳಿ ಸೂಟ್‌ಕೇಸ್‌ ಕೊಂಡೊಯ್ಯುವ ವೇಳೆ ಗೆಳತಿ ಕಿರುಚಿದ್ದಾಳೆ.

ಈ ಸದ್ದು ಕೇಳಿದ ಸಿಬ್ಬಂದಿ ಅನುಮಾನಗೊಂಡು ಯುವಕನ ಜೊತೆಗೆ ಇದ್ದ ಸೂಟ್‌ಕೇಸ್‌ ಒಳಗೆ ಏನಿದೆ ಅದನ್ನು ತೆರೆಯಲು ಹೇಳಿದ್ದಾರೆ, ಇದರಿಂದ ಬೆದರಿದ ಯುವಕ ಮೊದಲು ಇದರಲ್ಲಿ ಏನಿಲ್ಲ ನನ್ನ ಬಟ್ಟೆಗಳು ಎಂದು ಸಿಬ್ಬಂದಿ ಬಳಿ ಸುಳ್ಳು ಹೇಳಿದ್ದಾನೆ ಆದರೂ ಅನುಮಾನಗೊಂಡ ಹಾಸ್ಟೆಲ್ ಸಿಬ್ಬಂದಿಗಳು ಸೂಟ್‌ಕೇಸ್‌ ತೆರೆಯುವಂತೆ ಹೇಳಿದ್ದಾರೆ ಇದಕ್ಕೆ ಒಪ್ಪದೇ ಇದ್ದಾಗ ಸಿಬ್ಬಂದಿಗಳೇ ಹೋಗಿ ಸೂಟ್‌ಕೇಸ್‌ ಓಪನ್ ಮಾಡಿದ್ದಾರೆ.

ಸೂಟ್‌ಕೇಸ್‌ ಓಪನ್ ಮಾಡುತ್ತಿದ್ದಂತೆ ಅದರ ಒಳಗೆ ಯುವತಿಯೊಬ್ಬಳು ಇರುವುದು ಕಂಡು ಸಿಬ್ಬಂದಿಗಳು ಶಾಕ್ ಆಗಿದ್ದಾರೆ, ಬಳಿಕ ಈ ವಿಚಾರವನ್ನು ಉನ್ನತ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಸದ್ಯ ಯುವಕ ಅದೇ ಕಾಲೇಜಿನಲ್ಲಿ ಓಡುತ್ತಿದ್ದರೆ ಸೂಟ್‌ಕೇಸ್‌ ಒಳಗೆ ಇದ್ದ ಯುವತಿ ಅದೇ ಕಾಲೇಜಿನವಳಾ ಅಥವಾ ಬೇರೆ ಕಾಲೇಜಿನವಳಾ ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ.

Comments are closed.