Viral: ಮಹಿಳೆಯಿಂದ ಗುಟ್ಕಾ ಪ್ಯಾಕೆಟ್ ಕಿತ್ತುಕೊಂಡ ಕೇಂದ್ರ ಸಚಿವ!!

Share the Article

Viral Video : ಕಾರ್ಯಕ್ರಮ ಒಂದರಲ್ಲಿ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಗುಟ್ಕಾ ಜಗತ್ತಿದ್ದ ಮಹಿಳೆಯ ಕೈಯಿಂದ ಗುಟ್ಕಾ ಪ್ಯಾಕೆಟ್ ಅನ್ನು ಕಿತ್ತುಕೊಂಡು ಆಕೆಯನ್ನು ಎಚ್ಚರಿಸಿದ ಘಟನೆ ನಡೆದಿದೆ.

ಹೌದು, ಮಧ್ಯಪ್ರದೇಶದ ಶಿವಪುರಿಯಲ್ಲಿದ್ದಾಗ ಗುಟ್ಕಾ ತಿನ್ನುತ್ತಿದ್ದ ಮಹಿಳೆಯೊಬ್ಬಳು ಕೇಂದ್ರ ಸಚಿವರ ಕೈಗೆ ಸಿಕ್ಕಿಬಿದ್ದಿದ್ದಾಳೆ. ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಮಹಿಳೆಯಿಂದ ಗುಟ್ಕಾ (ತಂಬಾಕು) ಪ್ಯಾಕೆಟ್ ತೆಗೆದುಕೊಂಡು ತಂಬಾಕು ಜಗಿಯುವುದನ್ನು ನಿಲ್ಲಿಸುವಂತೆ ಸಲಹೆ ನೀಡಿದ್ದಾರೆ. ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿ ವೈರಲ್(Viral Video) ಆಗಿದೆ.

ವೈರಲ್ ವಿಡಿಯೊದಲ್ಲಿ, ಸಚಿವರು ಮಹಿಳೆಯೊಬ್ಬಳು ಗುಟ್ಕಾ ಜಗಿಯುತ್ತಿರುವುದನ್ನು ನೋಡಿದ್ದಾರೆ. ತಕ್ಷಣ ಅವರು ಅವಳನ್ನು ನಿಲ್ಲಿಸಿ ನೀವು ತಂಬಾಕು ಜಗಿಯುತ್ತಿದ್ದೀರಾ? ಎಂದು ಪ್ರಶ್ನಿಸಿದ್ದಾರೆ. ಆಗ ಮಹಿಳೆ ಹೌದು ಎಂದು ತಲೆಯಾಡಿಸುತ್ತಿದ್ದಂತೆ, ಸಿಂಧಿಯಾ ಇದು ಆರೋಗ್ಯಕ್ಕೆ ಕೆಟ್ಟದು ಎಂದು ನಿಮಗೆ ತಿಳಿದಿದೆ, ಅಲ್ಲವೇ?… ಇದು ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಎಂದು ನಿಮಗೆ ತಿಳಿದಿದೆ, ಅಲ್ಲವೇ? ಎಂದು ಸಲಹೆ ನೀಡಿದ್ದಾರೆ. ಹಾಗೂ ನಂತರ ಸಚಿವ ಸಿಂಧಿಯಾ ಅವರು ಮಹಿಳೆಗೆ ಬ್ಯಾಗ್‍ನಿಂದ ಗುಟ್ಕಾ ಪ್ಯಾಕೆಟ್ ತೆಗೆದುಕೊಂಡುವಂತೆ ಕೇಳಿದ್ದಾರೆ.

ಆಗ ಮಹಿಳೆ ನಗುತ್ತಾ ತನ್ನ ಬ್ಯಾಗ್‍ನಲ್ಲಿದ್ದ ಗುಟ್ಕಾ-ಪ್ಯಾಕೆಟ್ ಅನ್ನು ಸಿಂಧಿಯಾ ಅವರಿಗೆ ವಿಧೇಯತೆಯಿಂದ ನೀಡಿದ್ದಾಳೆ. ನಂತರ ಸಚಿವರು ಅದನ್ನು ಎಸೆಯುವಂತೆ ತಮ್ಮ ಜನರಿಗೆ ಆದೇಶಿಸಿದ್ದಾರೆ. ಇದರ ನಂತರ, ಸಿಂಧಿಯಾ ಮಹಿಳೆಯನ್ನು ಸಮಾಧಾನಪಡಿಸಿ, ” ನಿಮ್ಮ ಗುಟ್ಕಾ-ಪ್ಯಾಕೆಟ್ ತೆಗೆದುಕೊಂಡಿದ್ದೇನೆ ಎಂದು ಬೇಸರ ಮಾಡಿಕೊಳ್ಳಬೇಡಿ, ಇನ್ನು ಮುಂದೆ ನೀವು ಆರೋಗ್ಯವಾಗಿರುತ್ತೀರಿ. ಅದನ್ನು ಮತ್ತೆ ತಿನ್ನಬೇಡಿ ಎಂದು ಹೇಳಿದ್ದಾರೆ.

Comments are closed.