Aadhaar card: ಇನ್ನು ಎಲ್ಲೆಡೆಗೆ ಆಧಾರ್ ಕಾರ್ಡ್ ಕೊಂಡೊಯ್ಯುವ ಅಗತ್ಯವಿಲ್ಲ: ಹೊಸ ಆಧಾರ್ ಆ್ಯಪ್ ಬಿಡುಗಡೆ ಮಾಡಿದ ಕೇಂದ್ರ ಸರಕಾರ

Aadhaar card: ಕೇಂದ್ರ ಸರಕಾರ ಸಂಪೂರ್ಣ ಸುರಕ್ಷಿತವಾಗಿರುವ ಆಧಾರ್ ಆ್ಯಪ್ ಒಂದನ್ನು ಅಭಿವೃದ್ಧಿಪಡಿಸಿದ್ದು, ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಬುಧವಾರ ಹೊಸ ಆ್ಯಪ್ ಬಿಡುಗಡೆ ಮಾಡಿದ್ದಾರೆ.
ಈ ಆ್ಯಪ್ ಇದ್ದರೆ ಆಧಾರ್ ಕಾರ್ಡನ್ನು (Aadhaar card) ಎಲ್ಲೆಡೆಗೆ ಕೊಂಡೊಯ್ಯುವ ಅಗತ್ಯವಿಲ್ಲ. ಪ್ರಸ್ತುತ ಈ ಅಪ್ಲಿಕೇಶನ್ ಬೀಟಾ ಆವೃತ್ತಿಯಲ್ಲಿದ್ದು, ಯುಐಡಿಎಐ ಇದನ್ನು ಪರೀಕ್ಷಿಸುತ್ತಿದೆ. ಎಲ್ಲ ಪರೀಕ್ಷೆಗಳು ಪೂರ್ಣಗೊಂಡ ನಂತರ ಅದನ್ನು ಪ್ಲೇಸ್ಟೋರ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ.
ಸಚಿವ ಅಶ್ವಿನಿ ವೈಷ್ಣವ್ ಎಕ್ಸ್‌ನಲ್ಲಿ ಹಂಚಿಕೊಂಡಿರುವ ವೀಡಿಯೊ QR ಕೋಡ್ ಸ್ಕ್ಯಾನ್ ಮಾಡುವ ಮೂಲಕ ಮತ್ತು ಮುಖ ದೃಢೀಕರಣವನ್ನು ಬಳಸುವ ಮೂಲಕ ಈ ಪ್ರಕ್ರಿಯೆ ಪೂರ್ಣವಾಗುತ್ತದೆ ಎಂದು ತಿಳಿಸಲಾಗಿದೆ.
Comments are closed.