Bangalore: ಮುಸ್ಲಿಂ ಯುವತಿ-ಹಿಂದೂ ಯುವಕನ ಮೇಲೆ ಹಲ್ಲೆ; ನಾಲ್ವರು ಆರೋಪಿಗಳ ಸೆರೆ!

Bangalore: ದ್ವಿಚಕ್ರವಾಹನದಲ್ಲಿ ಕುಳಿತಿದ್ದ ಹಿಂದೂ ಯುವಕ, ಮುಸ್ಲಿಂ ಯುವತಿಯ ಮೇಲೆ ನೈತಿಕ ಪೊಲೀಸ್‌ಗಿರಿ ಮಾಡಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಅಪ್ರಾಪ್ತ ಸೇರಿ ಐವರನ್ನು ಚಂದ್ರಾಲೇಔಟ್ ಠಾಣೆಯ ಪೊಲೀಸರು ಬಂಧನ ಮಾಡಿದ್ದಾರೆ.
ಹಲ್ಲೆಗೊಳಗಾದ ಯುವತಿ ನೀಡಿದ ದೂರಿನ ಆಧಾರದಲ್ಲಿ ಚಂದ್ರಾಲೇಔಟ್‌ನ ಮಹೀಮ್, ಮನ್ಸೂರ್, ಅಫ್ರಿದಿ ಪಾಷಾ, ವಾಸೀಂ ಖಾನ್ ಬಂಧನ ಮಾಡಲಾಗಿದೆ.
ಮೂರು ದಿನಗಳ ಹಿಂದೆ ಚಂದ್ರಾಲೇಔಟ್ ಪಾರ್ಕ್‌ವೊಂದರ ಬಳಿ ಮುಸ್ಲಿಂ ಯುವತಿ ಹಾಗೂ ಹಿಂದೂ ಯುವಕ ಸ್ಕೂಟರ್‌ನಲ್ಲಿ ಕುಳಿತು ಮಾತನಾಡುತ್ತಿದ್ದರು. ಆರೋಪಿಗಳು ಇವರ ಬಳಿ ಪ್ರಶ್ನೆ ಮಾಡಿದ್ದು, ಹಲ್ಲೆ ಮಾಡಿದ್ದಾರೆ.
Comments are closed.