Sandalwood : ಮೇಘನಾ ರಾಜ್ – ವಿಜಯರಾಘವೇಂದ್ರ ಮದುವೆ? ನಟ – ನಟಿಯಿಂದ ಅಪ್ಡೇಟ್

Sandalwood : ಸ್ಯಾಂಡಲ್‌ವುಡ್ ನಟ ಚಿರಂಜೀವಿ ಸರ್ಜಾ ಅಗಲಿದ ಬಳಿಕ ಮೇಘನಾ ರಾಜ್ ನೊಂದು ಹೋಗಿದ್ದಾರೆ. ಒಡಲಲ್ಲಿ ಪುಟ್ಟ ಕಂದಮ್ಮನ್ನು ಇಟ್ಟುಕೊಂಡು ಯಾತನೆ ಅನುಭವಿಸುತ್ತಿದ್ದಾರೆ. ಇತ್ತ ವಿಜಯ ರಾಘವೇಂದ್ರ ಅವರು ಕೂಡ ತಮ್ಮ ಪ್ರೀತಿಯ ಮಡದಿಯನ್ನು ನೋವು ತಿನ್ನುತ್ತಿದ್ದಾರೆ. ಹೀಗಿರುವಾಗ ಈ ಇಬ್ಬರು ನಟ-ನಟಿಯರ ಎರಡನೇ ಮದುವೆ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಚರ್ಚೆಯಾಗುತ್ತಿದೆ. ಅದರಲ್ಲೂ ಬೇಸರದ ಸಂಗತಿ ಎಂದರೆ ಮೇಘನಾ ರಾಜ್ ಮತ್ತು ವಿಜಯ ರಾಘವೇಂದ್ರ ಇಬ್ಬರು ಪರಸ್ಪರ ಮದುವೆಯಾಗುತ್ತಾರೆ ಎಂಬುದಾಗಿ ಕೆಲವು ಕಿಡಿಗೇಡಿಗಳು ಸುದ್ದಿ ಹಬ್ಬಿಸುತ್ತಿದ್ದಾರೆ.
ಹೌದು, ನಟಿ ಮೇಘನಾ ರಾಜ್ ಅವರು ತಮ್ಮ 2ನೇ ಮದುವೆ ಬಗ್ಗೆ ಕೆಲ ದಿನಗಳ ಹಿಂದೆ ರಿಯಾಕ್ಷನ್ ಕೊಟ್ಟಿದ್ದ ವಿಡಿಯೋ ವೈರಲ್ ಆಗಿತ್ತು. ನಟಿ ಮೇಘನಾ ರಾಜ್ ಅವರು ಮಗನ ಭವಿಷ್ಯಕ್ಕೆ ಅಂದ್ರೆ, ರಾಯನ್ ರಾಜ್‌ಗೆ ಉತ್ತಮ ಭವಿಷ್ಯ ಕಟ್ಟಿಕೊಡಲು ಈಗ ಸಾಕಷ್ಟು ಕಷ್ಟಪಡುತ್ತಿದ್ದಾರೆ. ಹಾಗೇ ಮತ್ತೊಂದು ಕಡೆ ವಿಜಯ್ ರಾಘವೇಂದ್ರ ಅವರು ಈಗ ತಮ್ಮ ಮಗನ ಭವಿಷ್ಯಕ್ಕಾಗಿ ಒದ್ದಾಡುತ್ತಿದ್ದಾರೆ. ಕೆಲವು ದಿನಗಳ ಹಿಂದಷ್ಟೇ, ನಟ ವಿಜಯ್ ರಾಘವೇಂದ್ರ ಅವರ ಮಗ 10ನೇ ತರಗತಿ ಅಂದ್ರೆ, ಎಸ್‌ಎಸ್‌ಎಲ್‌ಸಿ ಪರೀಕ್ಷೆಗಾಗಿ ಓದುತ್ತಿರುವ ವಿಡಿಯೋ & ಫೋಟೋ ವೈರಲ್ ಆಗಿತ್ತು. ಹೀಗಿದ್ದಾಗಲೇ, ಮೇಘನಾ ರಾಜ್ ಜೊತೆ 2ನೇ ಮದುವೆ ಚರ್ಚೆ ಹಬ್ಬಿದೆ.
ಇದರಿಂದ ಮೇಘನಾ ರಾಜ್ ಸೇರಿದಂತೆ ಅವರ ಕುಟುಂಬಸ್ಥರು ಆಪ್ತರು ತುಂಬಾ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಜೊತೆಗೆ ಮೇಘನ ರಾಜ್ ಕೂಡ ಇದಕ್ಕೆ ಸ್ಪಷ್ಟಣೆಯನ್ನು ನೀಡಿದ್ದಾರೆ. ಆದರೂ ಕೂಡ ಊಹಾಪೋಹ ಸುದ್ದಿಗಳು ಹರಿದಾಡುತ್ತಲೇ ಇವೆ. ಇದೀಗ ವಿಜಯರಾಘವೇಂದ್ರ ಈ ವಿಚಾರದಲ್ಲಿ ಕಡ್ಡಿ ಮುರಿದಂತೆ ಮಾತನಾಡಿದ್ದಾರೆ.
ಖಾಸಗಿ ಮಾದ್ಯಮವೊಂದು ಮೇಘನರಾಜ್ ಜೊತೆಗೆ ಎರಡನೇ ಮದುವೆ ಬಗ್ಗೆ ಕೇಳಿದಾಗ ವಿಜಯರಾಘವೇಂದ್ರ ಸ್ಪಷ್ಟನೆ ನೀಡಿದ್ದಾರೆ. ‘ನಾನು ಮೇಘನಾರಾಜ್ ಅವರಿಗೆ ಸ್ನೇಹಿತ ಅಷ್ಟೇ. ಮದುವೆ ಆಗುವುದು ಸುಳ್ಳು ಸುದ್ದಿ. ನಾನು ಆ ರೀತಿ ಯೋಚನೆ ಮಾಡಲು ಸಾಧ್ಯವಿಲ್ಲ’ ಎಂದು ವಿಜಯರಾಘವೇಂದ್ರ ಕಡ್ಡಿಮುರಿದಂತೆ ಹೇಳಿಕೊಂಡಿದ್ದಾರೆ.
ಅಲ್ಲದೆ ಫೇಕ್ ಸುದ್ದಿಗಳನ್ನು ಮಾಡೋರ ವಿರುದ್ಧ ಮೇಘನಾ ರಾಜ್ ಹಾಗೂ ವಿಜಯ ರಾಘವೇಂದ್ರ ಲೀಗಲ್ ಆಗಿ ಆಕ್ಞನ್ ತೆಗೆದುಕೊಳ್ಳುವ ಬಗ್ಗೆ ಯೋಚನೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಇದರ ಕುರಿತಾಗಿ ಪ್ರೆಸ್ ಮೀಟ್ ತೆಗೆದುಕೊಳ್ಳುವ ಬಗ್ಗೆ ಕೂಡ ಯೋಚನೆ ಮಾಡಿದ್ದಾರೆ ಎನ್ನಲಾಗುತ್ತಿದೆ.
Comments are closed.