Belthangady: ಬೆಳ್ತಂಗಡಿ: ಕೈಕಾಲು ಕತ್ತರಿಸಿದ ಚಿರತೆಯ ಮೃತ ದೇಹ ಪತ್ತೆ!

Belthangady: ಬೆಳ್ತಂಗಡಿ (Belthangady) ಸವಣಾಲು ಗ್ರಾಮದ ಮೀಸಲು ಅರಣ್ಯ ಪ್ರದೇಶ ಇತ್ತಿಲಪೆಲ ಎಂಬಲ್ಲಿ ಕೊಳೆತ ಸ್ಥಿತಿಯಲ್ಲಿ ಚಿರತೆಯ ಮೃತ ದೇಹ ಕಂಡು ಬಂದಿದೆ.
ಚಿರತೆಯ ಕಾಲುಗಳನ್ನು ತುಂಡರಿಸಿದ ರೀತಿಯಲ್ಲಿ ಪತ್ತೆಯಾಗಿರುವ ಕಾರಣ ಯಾರೋ ದುಷ್ಕರ್ಮಿಗಳು ಕೊಂದು ಕಾಲಿನ ಉಗುರುಗಳಿಗಾಗಿ ಕಾಲನ್ನು ತುಂಡರಿಸಿಕೊಂಡು ಹೋಗಿರುವ ಬಗ್ಗೆಯೂ ಅನುಮಾನ ವ್ಯಕ್ತವಾಗುತ್ತಿದೆ.
ಅರಣ್ಯ ಇಲಾಖೆಯವರು ಈಗಾಗಲೇ ಮಾಹಿತಿ ಸಂಗ್ರಹಿಸುತಿದ್ದಾರೆ. ಬೇಟೆಗಾರರಿಗೆ ಬಲಿಯಾಗಿದೆಯೋ ಅಥವಾ ಇನ್ಯಾವುದೋ ಸಮಸ್ಯೆಗಳಿಂದ ಸಾವನ್ನಪ್ಪಿದ್ದೆಯೋ ಎಂಬುವುದು ತನಿಖೆಯಿಂದ ಗೊತ್ತಾಗಬೇಕಿದೆ.
Comments are closed.