AI ಸಹಾಯದಿಂದ ಮಗು ಜನನ !!

AI: ಕೃತಕ ಬುದ್ಧಿಮತ್ತೆ ಇಂದು ವಿಶ್ವದಾದ್ಯಂತ ತಂದ ಚಾಪನ್ನು ವ್ಯಾಪಿಸಿದೆ. ಏನು ಕೇಳಿದರೂ ಕೂಡ ಕ್ಷಣಾರ್ಧದಲ್ಲಿ ನೀಡಬಲ್ಲಂತಹ ಚಾಕ ಚಕ್ಯತೆ ಇದರಲ್ಲಿ ಇದೆ. ಇಂದು ಎಲ್ಲಾ ಕ್ಷೇತ್ರಗಳಲ್ಲೂ ಇದರ ಬಳಕೆಯಾಗುತ್ತಿರುವುದುಹಾಗೂ ಅನುಭವಿ ತಜ್ಞರು, ವೈದ್ಯರುಗಳಿಂದ ಆಗುತ್ತಿದ್ದ ಕೆಲಸಗಳನ್ನು ಇಂದು ಒಂದು ಯಂತ್ರ ಮಾಡುತ್ತದೆ ಎಂಬುದು ಮುಂದಿನ ಅಪಾಯವನ್ನು ಸೂಚಿಸುತ್ತದೆ ಎಂಬುದಾಗಿ ಅನೇಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಈ ಬೆನ್ನಲ್ಲೇ AI ಯಿಂದ ಒಂದು ಐತಿಹಾಸಿಕ ಸಾಧನೆ ನಡೆದಿದೆ. ವಿಶ್ವದಲ್ಲೇ ಮೊದಲ ಬಾರಿಗೆ ಸಂಪೂರ್ಣ ಸ್ವಯಂಚಾಲಿತ IVF ವ್ಯವಸ್ಥೆ ಮತ್ತು ಕೃತಕ ಬುದ್ಧಿಮತ್ತೆ (AI) ಸಹಾಯದಿಂದ ಮಗು ಜನಿಸಿದೆ.
ಹೌದು, ಮೆಕ್ಸಿಕೋದ ಗ್ವಾಡಲಜಾರಾದಲ್ಲಿ ಈ ಪವಾಡದ ಘಟನೆ ನಡೆದಿದ್ದು, 40 ವರ್ಷದ ಮಹಿಳೆಯೊಬ್ಬರು ಕೃತಕ ಬುದ್ಧಿಮತ್ತೆ ನೆರವಿನ ಐವಿಎಫ್ ವಿಧಾನದ ಮೂಲಕ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ್ದಾರೆ. ವಿಶೇಷವೆಂದರೆ ಈ ಪ್ರಕ್ರಿಯೆಯಲ್ಲಿ, ಮಾನವ ಕೈಗಳ ಬದಲಿಗೆ, ಯಂತ್ರಗಳು ICSI (ಇಂಟ್ರಾಸೈಟೋಪ್ಲಾಸ್ಮಿಕ್ ವೀರ್ಯ ಇಂಜೆಕ್ಷನ್) ನ ಸಂಪೂರ್ಣ ಪ್ರಕ್ರಿಯೆಯನ್ನು ನಿರ್ವಹಿಸಿದ್ದಾವೆ. ನ್ಯೂಯಾರ್ಕ್ ಮತ್ತು ಮೆಕ್ಸಿಕೋದ ವಿಜ್ಞಾನಿಗಳ ಸಹಾಯದಿಂದ ಒಂದು ತಂಡವು, AI ಮತ್ತು ಡಿಜಿಟಲ್ ನಿಯಂತ್ರಣವನ್ನು ಬಳಸಿಕೊಂಡು ಈ ಪ್ರಕ್ರಿಯೆಯ ಎಲ್ಲಾ 23 ಹಂತಗಳನ್ನು ನಿರ್ವಹಿಸುವ ಸಂಪೂರ್ಣ ಸ್ವಯಂಚಾಲಿತ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ.
ಅಂದಹಾಗೆ ಈ ವ್ಯವಸ್ಥೆಯು ವೀರ್ಯವನ್ನು ಆಯ್ಕೆ ಮಾಡುವುದಲ್ಲದೆ, ಲೇಸರ್ ಮೂಲಕ ಅದನ್ನು ನಿಷ್ಕ್ರಿಯಗೊಳಿಸಿ ಅಂಡಾಣುವಿಗೆ ಚುಚ್ಚಿದೆ. ಬಳಿಕ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಪ್ರತಿ ಮೊಟ್ಟೆಗೆ ಸರಿಸುಮಾರು 9 ನಿಮಿಷ 56 ಸೆಕೆಂಡುಗಳು ಹಿಡಿದಿವೆ. ಒಟ್ಟಾರೆ ಮುಂಬರುವ ದಿನಗಳಲ್ಲಿ ಈ ತಂತ್ರವು ವೇಗವಾಗಿ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಪರಿಣಮಿಸುತ್ತದೆ ಎಂದು ವೈದ್ಯರು ಹೇಳಿದ್ದಾರೆ.
Comments are closed.