Mangaluru: ಅತ್ತಾವರ ಜೋಡಿ ಕೊಲೆ ಪ್ರಕರಣ; ಮೂವರು ಆರೋಪಿಗಳ ಮೇಲಿನ ಆರೋಪ ಸಾಬೀತು!

Share the Article

Mangaluru: 2014 ರಲ್ಲಿ ನಗರದ ಅತ್ತಾವರದಲ್ಲಿ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಆರೋಪಿಗಳ ಮೇಲಿನ ಆರೋಪ ಮಂಗಳೂರಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿದೆ.

ಕೇರಳ ಕಾಸರಗೋಡಿನ ಚೆರ್ಕಳ ಮನೆಯ ಮೊಹಮ್ಮದ್‌ ಮುಹಜೀರ್‌ಸನಾಫ್‌ (25), ಕಾಸರಗೋಡು ವಿದ್ಯಾನಗರದ ಎ.ಮೊಹಮ್ಮದ್‌ ಇರ್ಷಾದ್‌ (24), ಹಾಗೂ ಎ.ಮೊಹಮ್ಮದ್‌ ಸಫ್ವಾನ್‌ (24) ಅಪರಾಧಿಗಳು.

ಕೇರಳ ಕೋಝಿಕ್ಕೋಡ್‌ನ ನಾಫೀರ್‌ ಮತ್ತು ಫಹೀಮ್‌ ಕೊಲೆಯಾದ ವ್ಯಕ್ತಿಗಳು.

ನಾಫೀರ್‌ ಮತ್ತು ಫಹೀಮ್‌ ಗೆಳೆಯರಾಗಿದ್ದು, ವಿದೇಶದಿಂದ ನಾಫೀರ್‌ ಚಿನ್ನದ ಗಟ್ಟಿಗಳನ್ನು ತಂದಿದ್ದು, ಮಾರಾಟ ಮಾಡಲು ಮೂವರು ಆರೋಪಿಗಳು ಸಹಕಾರ ನೀಡಿದ್ದರು. ಚಿನ್ನ ಮಾರಾಟ ಮಾಡಿ ಬಂದ ಹಣದ ವಿಷಯದಲ್ಲಿ ನಫೀರ್‌ ಮತ್ತು ಫಹೀರ್‌ ತಕರಾರು ಮಾಡಿದಾಗ, ಇದರ ಸಿಟ್ಟುಗೊಂಡ ಮೂವರು ಆರೋಪಿಗಳು ಜುಲೈ 1,2014 ರಂದು ಕೊಲೆ ಮಾಡಿದ್ದಾರೆ.

ಠಾಣಾಧಿಕಾರಿ ದಿನಕರಶೆಟ್ಟಿ ತನಿಖೆ ಪೂರ್ಣಗೊಳಿಸಿ, ಆರೋಪಿಗಳ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದು, ನ್ಯಾಯಾಲಯವು 47 ಸಾಕ್ಷಿದಾರರನ್ನು ವಿಚಾರಣೆ ಮಾಡಿಸಿ, 97 ದಾಖಲೆಗಳನ್ನು ಗುರುತಿಸಿ ಮೂವರು ಆರೋಪಿಗಳನ್ನು ದೋಷಿಗಳೆಂದು ತೀರ್ಮಾನ ಪ್ರಕಟ ಮಾಡಿದೆ.

Comments are closed.