Gold loan: ಇನ್ಮುಂದೆ ಕಡಿತಗೊಳ್ಳಲಿದೆ ಒಡವೆ ಮೌಲ್ಯಕ್ಕೆ ಅನುಗುಣವಾದ ಸಾಲದ ಮಿತಿ!

Gold loan: ಯಾವುದೇ ಬ್ಯಾಂಕು ಮತ್ತು ಫೈನಾನ್ಸ್ ಕಂಪನಿಗೆ ಒಡವೆ ಒತ್ತೆ ಇಟ್ಟು ಸುಲಭವಾಗಿ ಸಾಲ ಪಡೆಯಬಹುದು. ಬ್ಯಾಂಕುಗಳಿಗೂ ಈ ಗೋಲ್ಡ್ ಲೋನ್ (Gold loan)ರಿಸ್ಕ್ ರಹಿತ ಎನಿಸುತ್ತವೆ. ಆದರೆ, ಈಗ ಭಾರತೀಯ ರಿಸರ್ವ್ ಬ್ಯಾಂಕ್ ಗೋಲ್ಡ್ ಲೋನ್ ಮೇಲೆ ಕಣ್ಣಿಟ್ಟಿದೆ. ಆರ್ಬಿಐ ಎಂಪಿಸಿ ಸಭೆ ಬಳಿಕ ಗೋಲ್ಡ್ ಲೋನ್ ನಿಯಮಗಳನ್ನು ಪರಿಷ್ಕರಿಸುವುದಾಗಿ ಹೇಳಲಾಗಿದೆ. ಅದರಂತೆ ಡ್ರಾಫ್ಟ್ವೊಂದನ್ನು ಸಿದ್ಧಪಡಿಸಲಾಗಿದೆ. ಇದರಲ್ಲಿ ಮಾಡಲಾಗಿರುವ ಪ್ರಸ್ತಾವಗಳಲ್ಲಿ ಪ್ರಮುಖವಾದುದ ಎಲ್ಟಿವಿ, ಅಥವಾ ಲೋನ್ ಟು ವ್ಯಾಲ್ಯು. ಅಂದರೆ, ಚಿನ್ನದ ಮೌಲ್ಯಕ್ಕೆ ಅನುಗುಣವಾದ ಸಾಲ.
ಕೋವಿಡ್ ಸಂದರ್ಭದಲ್ಲಿ ಜನರಿಗೆ ಗೋಲ್ಡ್ ಲೋನ್ ಸುಲಭವಾಗಿ ಸಿಗಲು ಸಾಧ್ಯವಾಗಲಿ ಎಂದು ಎಲ್ಟಿವಿಯನ್ನು ಶೇ. 90ಕ್ಕೆ ಹೆಚ್ಚಿಸಲಾಗಿತ್ತು. ಅಂದರೆ, ಚಿನ್ನದ ಮೌಲ್ಯದ ಶೇ. 90ರಷ್ಟು ಹಣವನ್ನು ಬ್ಯಾಂಕುಗಳು ಸಾಲವಾಗಿ ಕೊಡಲು ಅವಕಾಶ ಕೊಡಲಾಗಿತ್ತು. ಈಗ ಎಲ್ಟಿವಿಯನ್ನು ಶೇ. 75ಕ್ಕೆ ಮಿತಿಗೊಳಿಸಲು ಪ್ರಸ್ತಾಪಿಸಲಾಗಿದೆ.
ಬಡ್ಡಿ ಕಟ್ಟದೇ ಬಾಕಿ ಉಳಿಯುವ ಹಣವೂ ಎಲ್ಟಿವಿ ವ್ಯಾಪ್ತಿಗೆ:
ಅಂದರೆ ಗ್ರಾಹಕರು ಶೇ. 75ರಷ್ಟು ಎಲ್ಟಿವಿಯಲ್ಲಿ ಗೋಲ್ಡ್ ಲೋನ್ ಪಡೆದಲ್ಲಿ, ಒಂದು ವರ್ಷ ಅಥವಾ ಕೆಲ ತಿಂಗಳಾದರೂ ಯಾವುದೇ ಬಡ್ಡಿ ಕಟ್ಟದೇ ಹೋದರೆ ಆಗ ಇರುವ ಸಾಲ ಬಾಕಿಯು ಶೇ. 75ರ ಎಲ್ಟಿವಿ ಮಿತಿಯಲ್ಲೇ ಇರಬೇಕು ಎನ್ನುವ ನಿಯಮವನ್ನು ಆರ್ಬಿಐ ತರುತ್ತಿದೆ.
ಉದಾಹರಣೆಗೆ, ನೀವು 10 ಗ್ರಾಮ್ ಒಡವೆ ಒತ್ತೆ ಇಟ್ಟರೆ, ಅದರ ಒಂದು ಗ್ರಾಮ್ ಮೌಲ್ಯ 8,500 ರೂ ಇಂದಿಟ್ಟುಕೊಂಡರೆ, ನಿಮಗೆ 63,750 ರೂ ಸಾಲದ (ಶೇ. 75 ಎಲ್ಟಿವಿ) ಅವಕಾಶ ಇರುತ್ತದೆ. ನೀವು ಕೆಲ ಕಾಲ ಬಡ್ಡಿ ಕಟ್ಟದೇ, ಸುಮಾರು 10,000 ರೂ ಬಡ್ಡಿ ಬೆಳೆದು ನಿಮ್ಮ ಸಾಲ ಬಾಕಿ 73,000 ಆಯಿತು ಎಂದಿಟ್ಟುಕೊಳ್ಳಿ. ಅದು ಶೇ. 75ರ ಎಲ್ಟಿವಿ ವ್ಯಾಪ್ತಿಯೊಳಗೇ ಇರಬೇಕು. ಇಲ್ಲದಿದ್ದರೆ ಬ್ಯಾಂಕ್ ದಂಡ ಕಟ್ಟಬೇಕಾಗುತ್ತದೆ.
ಇಲ್ಲಿ ದಂಡ ಎಂದರೆ, ಒಟ್ಟು ಸಾಲದ ಹಣದಲ್ಲಿ ಶೇ. 1ರಷ್ಟನ್ನು ಬ್ಯಾಂಕ್ನವರು ಲೋನ್ಗೆ ಕವರ್ ಆಗಿ ಎತ್ತಿಡಬೇಕು. 30 ದಿನಗಳಿಗಿಂತ ಹೆಚ್ಚು ಅವಧಿ ಶೇ. 75ರ ಎಲ್ಟಿವಿ ಮಿತಿ ಹೆಚ್ಚು ಇದ್ದಾಗ ಈ ಕ್ರಮ ಇರುತ್ತದೆ. ಬ್ಯಾಂಕ್ನವರು ಗ್ರಾಹಕರಿಂದ ಆದಷ್ಟು ಬೇಗ ಬಡ್ಡಿಯನ್ನಾದರೂ ವಸೂಲಿ ಮಾಡಿ ಎಲ್ಟಿವಿಯನ್ನು ಶೇ. 75ರ ಮಿತಿಯೊಳಗೆ ತರಬೇಕಾಗುತ್ತದೆ.
ಕಮರ್ಷಿಯಲ್ ಬ್ಯಾಂಕುಗಳು ಇನ್ಕಮ್ ಜನರೇಶನ್ಗೆ ನೀವು ಒಡವೆ ಸಾಲಗಳಿಗೆ ಶೇ. 75ರ
ಎಲ್ಟಿವಿ ಮಿತಿ ಇರುವುದಿಲ್ಲ. ಅದಕ್ಕಿಂತಲೂ ಹೆಚ್ಚಿನ ಮೊತ್ತವನ್ನು ಸಾಲವಾಗಿ ನೀಡಬಹುದು. ಆದರೆ, ಎನ್ಬಿಎಫ್ಸಿಗಳು ಕನ್ಷಂಪ್ಷನ್ ಸಾಲವಾಗಲೀ, ಇನ್ಕಮ್ ಜನರೇಶನ್ ಸಾಲವಾಗಲಿ ಶೇ. 75ರ ಎಲ್ಟಿವಿ ಮಿತಿಯನ್ನು ಪಾಲಿಸಬೇಕಾಗುತ್ತದೆ.
Comments are closed.