Madikeri: ನಕಲಿ ಫೋನ್ ಪೇ ವಂಚಕ: ಚಿನ್ನಕ್ಕೆ ಖರೀದಿಸಿ ಜೂಟ್!

Share the Article

Madikeri: ಬೆಲೆಬಾಳುವ ವಸ್ತುಗಳೇ ಇವನ ಟಾರ್ಗೆಟ್. ಸಮಯ, ಸಂದರ್ಭ ನೋಡಿಕೊಂಡು ಶಾಪ್ ಗಳಿಗೆ ಹೋಗ್ತಾನೆ! ಶಾಪ್ ನಲ್ಲಿ ಅಪ್ಪಟ ಗ್ರಾಹಕನಂತೆ ವರ್ತಿಸಿ ಬೆಲೆ ಬಾಳುವ ವಸ್ತುವನ್ನು ಖರೀದಿಸ್ತಾನೆ. ನಂತರ ಫೋನ್ ಪೇ ಮಾಡುವುದಾಗಿ ತಿಳಿಸಿ ಡೂಪ್ಲಿಕೇಟ್ App ನಿಂದ ಅಮೌಂಟ್ ಟ್ರಾನ್ಸ್ ಫರ್ ಆಗಿದೆ ಅಂತ ತಿಳಿಸಿ ಶಾಪ್ ನವರನ್ನು ಮಂಗ ಮಾಡಿ ಮಂಗಮಾಯ ಆಗಿರ್ತಾನೆ. ಇದೇ ರೀತಿ ಮೈಸೂರು ಜಿಲ್ಲೆ H.D. ಕೋಟೆಯ ಚಿನ್ನದ ಅಂಗಡಿಯಲ್ಲಿ ರೂ. 50 ಸಾವಿರ ಮೌಲ್ಯದ ಚಿನ್ನ ಖರೀದಿಸಿ ಚಳ್ಳೆಹಣ್ಣು ತಿನ್ನಿಸಿದ್ದಾನೆ.

ಈತ ದಿನಾಂಕ 02-04-2025 ರಂದು ಮೈಸೂರು ಜಿಲ್ಲೆಯ H.D. ಕೋಟೆ ತಾಲೂಕಿನಲ್ಲಿರುವ ರಾಜ್ ಬ್ಯಾಂಕರ್ಸ್ ಅಂಡ್ ಜ್ಯುವೆಲರ್ಸ್ ಗೆ ಬಂದಿದ್ದಾನೆ. ನಾನು ಇಲ್ಲೇ ಹತ್ತಿರದ ವಡ್ಡರ ಪಾಲ್ಯದಲ್ಲಿ ಇರುವುದು. ಹೆಸರು ಕಿರಣ್ ಎಂದೇಳಿ ತನ್ನ ಮೊಬೈಲ್ ನಂಬರ್ ಹಾಗೂ ವಾಟ್ಸಪ್ ನಂಬರನ್ನು (9353987202, 9353439803) ಕೂಡ ಕೊಟ್ಟಿದ್ದಾನೆ. ರೂ. 50 ಸಾವಿರ ಮೌಲ್ಯದ ಚಿನ್ನ ಖರೀದಿ ಮಾಡಿದ್ದಾನೆ. ಫೋನ್ ಪೇ ಮಾಡುವುದಾಗಿ ಹೇಳಿ ನಕಲಿ App ನಲ್ಲಿ ನಾಟಕವಾಡಿದ್ದಾನೆ. ಶಾಪ್ ನವರು ಹಣ ಬಂದಿಲ್ಲ ಎಂದಾಗ ನಂಬಿಕೆ ಬರುವಂತೆ ನಕಲಿ ಸ್ಕ್ರೀನ್ ಶಾಟ್ ಅನ್ನು ವಾಟ್ಸಾಪ್ ಮಾಡಿದ್ದಾನೆ. ಪುನಃ ದುಡ್ಡು ಬಂದಿಲ್ಲ ಅಂದಾಗ ನನ್ನ ಅಕೌಂಟ್ ನಲ್ಲಿ ಅಮೌಂಟ್ ಡಿಡಕ್ಟ್ ಆಗಿದೆ ಎಂದು ಹೇಳಿ ಸ್ಕ್ರೀನ್ ಶಾಟ್ ಶೇರ್ ಮಾಡಿ ತೆರಳಿದ್ದಾನೆ. ಒಂದು ವೇಳೆ ದುಡ್ಡು ಬಂದಿಲ್ಲ ಅಂದರೆ ಕಾಲ್ ಮಾಡಿ ಅಂತನೂ ಕೂಡ ಹೇಳಿದ್ದಾನೆ. ಡೌಟ್ ಬಂದು ಕಾಲ್ ಮಾಡಿದಾಗ ಇಲ್ಲೇ ಇದ್ದೀನಿ, 10 ನಿಮಿಷದಲ್ಲಿ ಬರುತ್ತೀನಿ ಅಂತ 2-3 ಸಲ ಹೇಳಿ ಪರಾರಿ ಆಗಿದ್ದಾನೆ.

Comments are closed.