School Van: ಡೀಸೆಲ್ ಬೆಲೆಯಲ್ಲಿ ಏರಿಕೆ – ಶಾಲಾ ವಾಹನ ಶುಲ್ಕ ಹೆಚ್ಚಳ

School Van: ಡೀಸೆಲ್ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಶಾಲಾ ವಾಹನಗಳ ಶುಲ್ಕವನ್ನು ಕೂಡ ಹೆಚ್ಚಿಸಲು ಖಾಸಗಿ ಶಾಲಾ ವಾಹನ ಸಂಘದಿಂದ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಹೌದು, ಮಾರ್ಚ್ 31 ವರೆಗೆ ಡೀಸೆಲ್ ಮಾರಾಟ ತೆರಿಗೆ ದರ 18.44% ಇತ್ತು. ರಾಜ್ಯ ಸರ್ಕಾರ ಏಪ್ರಿಲ್ 1 ರಿಂದ ಮಾರಾಟ ತೆರಿಗೆ ದರವನ್ನು 21.17% ಕ್ಕೆ ಹೆಚ್ಚಳ ಮಾಡಿತ್ತು. ಹೀಗಾಗಿ ಪ್ರತಿ ಲೀಟರ್ ಡೀಸೆಲ್ ದರ 2 ರೂ. ಏರಿಕೆಯಾದ ಹಿನ್ನೆಲೆಯಲ್ಲಿ ಈ ಬೆಲೆ ಹೆಚ್ಚಳದ (Price Hike) ಹೊರೆಯನ್ನು ಪೋಷಕರ ಹೆಗಲಿಗೆ ಹಾಕಲು ಖಾಸಗಿ ಶಾಲಾ ವಾಹನ ಸಂಘ (Private School Vehicle Association) ನಿರ್ಧಾರ ಕೈಗೊಂಡಿದೆ.
ಸದ್ಯ ತಿಂಗಳಿಗೆ 2,000 ರೂ – 3,000 ರೂ. ಶುಲ್ಕವಿದ್ದು ದರ ಏರಿಕೆಯಿಂದ 2,500 ರೂ- 3,500 ರೂ.ಗೆ ಏರಿಕೆಯಾಗಲಿದೆ. ಇದೇ ಶೈಕ್ಷಣಿಕ ವರ್ಷದಿಂದ ನೂತನ ದರ ಜಾರಿಯಾಗಲಿದೆ.
Comments are closed.