Davanagere: ಕುಡಿಯಲು ಹಣ ಕೊಡದಿದ್ದಕ್ಕೆ ತಲೆಗೆ ಹೊಡೆದು ತಾಯಿಯ ಕೊಲೆ! ಮಗನ ಬಂಧನ!

Davanagere: ಕುಡಿಯಲು ಹಣ ನೀಡಲಿಲ್ಲ ಎನ್ನುವ ಕಾರಣಕ್ಕೆ ಪಾಪಿ ಪುತ್ರನೋರ್ವ ತಾಯಿಯನ್ನು ಕೊಲೆ ಮಾಡಿದ ಘಟನೆ ದಾವಣಗೆರೆ ತಾಲೂಕು ಐಗೂರು ಗೊಲ್ಲರಹಟ್ಟಿ ಗ್ರಾಮದಲ್ಲಿ ನಡೆದಿದೆ.
ದೊಣ್ಣೆಯಿಂದ ಹೊಡೆದು ರತ್ನಾಬಾಯಿ (62) ಎಂಬಾಕೆಯನ್ನು ಪುತ್ರ ಕೊಲೆ ಮಾಡಿದ್ದಾನೆ.
ಕುಡಿತದ ಚಟ ಹೊಂದಿದ ಪುತ್ರ ರಾಘವೇಂದ್ರ ನಾಯ್ಕ್ ಈ ಕಾರಣಕ್ಕೆ ಹಣ ನೀಡುವಂತೆ ತಾಯಿಗೆ ಒತ್ತಾಯ ಮಾಡುತ್ತಿದ್ದ. ತಾಯಿ ಹಣ ಇಲ್ಲ ಎಂದು ಹೇಳಿದ್ದಕ್ಕೆ ದೊಣ್ಣೆಯಿಂದ ತಲೆಗೆ ಹೊಡೆದಿದ್ದಾನೆ. ಆರೋಪಿ ರಾಘವೇಂದ್ರ ನಾಯ್ಕನನ್ನು ಪೊಲೀಸರು ಬಂಧನ ಮಾಡಿದ್ದಾರೆ.
ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.