Kerala: ಪರೀಕ್ಷೆಗೆ ಬಂದಿದ್ದ ಅಭ್ಯರ್ಥಿಯೊಬ್ಬರ ಹಾಲ್ ಟಿಕೆಟ್ ಕಸಿದುಕೊಂಡ ಗಿಡುಗ!

Kerala: ಕೇರಳ (Kerala) ಸರಕಾರದ ಇಲಾಖಾ ಪರೀಕ್ಷೆಗೆ ಬಂದಿದ್ದ ಅಭ್ಯರ್ಥಿಯೊಬ್ಬರ ಪ್ರವೇಶಪತ್ರ ವನ್ನು ಗಿಡುಗವೊಂದು ಕಸಿದುಕೊಂಡು ಹಾರಿದ ಕುತೂಹಲಕಾರಿ ಎ. 10 ರಂದು ಗುರುವಾರ ನಡೆದಿದೆ.

ಈ ವಿಚಿತ್ರ ವಿದ್ಯಮಾನ ಗುರುವಾರ ಬೆಳಗ್ಗೆ ಕಾಸರಗೋಡು ಸರಕಾರಿ – ಶಾಲೆಯಲ್ಲಿ ನಡೆದಿದೆ. ಸರಕಾರಿ ಅಧಿಕಾರಿಗಳಿಗೆ ನಡೆಯುವ ಇಲಾಖಾ ಪರೀಕ್ಷೆ ಬೆಳಗ್ಗೆ 7.30ಕ್ಕೆ ನಡೆಯಬೇಕಿತ್ತು. ಪರೀಕ್ಷಾರ್ಥಿಗಳು 7 ಗಂಟೆಗೆ ಶಾಲೆ ತಲುಪುತ್ತಿದ್ದಂತೆ ಅಲ್ಲಿದ್ದ ಪರೀಕ್ಷಾರ್ಥಿಯೊಬ್ಬರ ಕೈಯಲ್ಲಿದ್ದ ಹಾಲ್ ಟಿಕೆಟ್‌ನ್ನು ಕಸಿದುಕೊಂಡು ಕಟ್ಟಡವೇರಿ
ಕುಳಿತಿತು. ಇದನ್ನು ಕಂಡು ಪರೀಕ್ಷಾರ್ಥಿಗಳು ಮತ್ತು ಇತರರು ಗಾಬರಿಗೊಂಡರು. ಸುಮಾರು 300 ಅಭ್ಯರ್ಥಿಗಳು ಅಲ್ಲಿದ್ದರು. ಎಲ್ಲರೂ ಸೇರಿ ಗದ್ದಲ ಮಾಡಿದರೂ ಗಿಡುಗ ಹಾಲ್ ಟಿಕೆಟ್ ಕೆಳಗೆ ಹಾಕಲಿಲ್ಲ. ಪರೀಕ್ಷಾರ್ಥಿಯು, ಪರೀಕ್ಷೆ ಬರೆಯಲು ಸಾಧ್ಯವಾಗುವುದಿಲ್ಲವೇನೂ ಚಿಂತೆಯಲ್ಲಿದ್ದಾಗ ಕೊನೆಯ ಗಂಟೆ ಬಾರಿಸುವ ಸ್ವಲ್ಪ ಸಮಯದ ಮೊದಲು ಗಿಡುಗ ಹಾಲ್ ಟಿಕೆಟನ್ನು ಕೆಳಗೆ ಬೀಳಿಸಿ ಹಾರಿ ಹೋಯಿತು.

Comments are closed.