Tamilunadu : ಪರೀಕ್ಷೆ ಬರೆಯುವಾಗ ಪಿರಿಯಡ್ಸ್ ಆದ ವಿದ್ಯಾರ್ಥಿನಿ – ಶಾಲೆಯಿಂದ ಹೊರಗೆ ಕಳುಹಿಸಿದ ಶಿಕ್ಷಕಿ

Tamilunadu : ಎಂಟನೇ ತರಗತಿ ವಿದ್ಯಾರ್ಥಿನಿ ಒಬ್ಬಳು ಪರೀಕ್ಷೆ ಬರೆಯುತ್ತಿರುವ ಸಂದರ್ಭದಲ್ಲಿ ಪಿರಿಯಡ್ಸ್ ಆದಳೆಂದು ಆಕೆಯನ್ನು ಶಿಕ್ಷಕಿಯು ಶಾಲೆಯಿಂದ ಹೊರ ಹಾಕಿರುವ ಅಘಾತಕಾರಿ ಘಟನೆ ತಮಿಳುನಾಡಿನಲ್ಲಿ ಬೆಳಕಿಗೆ ಬಂದಿದೆ. ಈ ಕುರಿತಾದ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈಗ ವೈರಲ್ ಆಗಿರುವ ವೀಡಿಯೊದಲ್ಲಿ, ಪುಟ್ಟ ಹುಡುಗಿಯ ತಾಯಿ ಅವಳ ಬಳಿಗೆ ಓಡಿಹೋಗಿ ಏನಾಯಿತು ಎಂದು ಕೇಳುತ್ತಿರುವುದು ಕಂಡುಬರುತ್ತದೆ. ಪ್ರಾಂಶುಪಾಲರು ತನ್ನನ್ನು ಹೊರಗೆ ಕೂರಿಸಿದ್ದಾರೆ ಎಂದು ವಿದ್ಯಾರ್ಥಿನಿ ತನ್ನ ತಾಯಿಗೆ ಹೇಳುತ್ತಾಳೆ. ಬಳಿಕ ಅವರು ಶಿಕ್ಷಕಿಯನ್ನು ಪ್ರಶ್ನೆಸುವುದನ್ನು ಕೂಡ ಕಾಣಬಹುದು.
Comments are closed.