Death: ಖ್ಯಾತ ಯಕ್ಷಗಾನ ಸಂಘಟಕ ಶ್ರೀ ಶಿವರಾಮ್ ಭಟ್ ಅಜೆಕಾರ್ ಇನ್ನಿಲ್ಲ!

Death: ಶ್ರೀ ಶಿವರಾಮ್ ಭಟ್ ಅಜೆಕಾರ್ ಇವರು ವಿದ್ಯಾಬ್ಯಾಸ ಮುಗಿಸಿ 1966ರಲ್ಲಿ ಬಾಲನಟ ನಾಗಿ ಯಕ್ಷಗಾನ ರಂಗಪ್ರವೇಶ ಮಾಡಿದರು. 1972 ರಲ್ಲಿ ಯಕ್ಷಗಾನ ಸಾಹಿತ್ಯ ಕಲೆಯ ದಂತಕತೆಯಾದ ಕಡಲ ತಡಿಯ ಭಾರ್ಗವ ಕೋಟ ಶಿವರಾಮ್ ಕಾರಂತ ಅವರ ಗರಡಿಯಲ್ಲಿ ಯಕ್ಷಗಾನ ಪಟ್ಟುಗಳನ್ನು ಕಲಿತು ಯಕ್ಷಗಾನ ದಲ್ಲಿ ನುರಿತರು ಮತ್ತು ಆ ಕಾಲದ ಹೆಸರಾಂತ ಬಡಗು ಕಲಾವಿದರ ಒಡನಾಟ ಇವರನ್ನು ಯಕ್ಷಗಾನ ಕ್ಷೇತ್ರದಲ್ಲಿ ಅನಿವಾರ್ಯವಾಗಿ ಕಲಾವಿದನಾಗು ವಂತೆ ಮಾಡಿತು.
ಪ್ರಮುಖವಾಗಿ ಹಾಸ್ಯ ನಟ ಖಳನಾಯಕ ಪೋಷಕ ಪಾತ್ರ ವನ್ನು ಉತ್ತಮವಾಗಿ ನಿರ್ವಹಿಸಿದರು. ಇವರ ಜಂಭವಾ. ಶನಿಶ್ಚರ. ರಾವಣ ಕೈಲಾಸ ಶಾಸ್ತ್ರೀ. ಬಬ್ರುವಾಹನದ ಮಂತ್ರಿ. ವಾಲಿ. ಬನಶಂಕರಿ ಪ್ರಸಂಗದ ಭದ್ರ ಪರಶುರಾಮ ಇವರಿಗೆ ಕೀರ್ತಿ ತಂದವು.
ಮೇಳದಲ್ಲಿ ಕಲಾವಿದರಗಿಯೂ ಸಂಘಟಕರಗಿಯೂ ಯಕ್ಷಗಾನ ಕ್ಷೇತ್ರದಿಂದ ನಿವೃತರಾದರು.
ನಂತರ ರಾಜ್ಯದಲ್ಲಿ ಪ್ರಖ್ಯಾತ ದೇಗುಲ ಕುಕ್ಕೆ ಸುಬ್ರಮಣ್ಯದ ಸಂಪುಟ ನರಸಿಂಹ ಸ್ವಾಮಿ ಮಠದ ಶ್ರೀ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥರ ಜೊತೆ ಸೇರಿ 2012ರ ವರೆಗೆ ಧಾರ್ಮಿಕ ಕಾರ್ಯಕ್ರಮ ನೇತೃತ್ವ ವಹಿಸಿ ಸೇವೆ ಸಲ್ಲಿಸಿದರು. ಯಕ್ಷಗಾನ ಧಾರ್ಮಿಕ ಮತ್ತು ಜೊತೆಗೆ ತನ್ನೂರು ಅಜೆಕಾರಿನಲ್ಲಿ ಕೃಷಿ ಮಾಡಿ ಕುಟುಂಬದೊಂದಿಗೆ ಜೀವನ ನಡೆಸಿದ ಇವರು ಏಪ್ರಿಲ್ 4ರಂದು ಹೃದಯಘಾತದಿಂದ ನಿಧನ ಹೊಂದಿದರು.
Comments are closed.