Patrol Bunk: ಪೆಟ್ರೋಲ್ ಬಂಕ್‌ನಲ್ಲಿ ಹೊಸ ನಿಯಮ- ಜೋಡಿಗಳಿಗೆ ಆ ರೂಮ್ ಕೂಡಾ ಫ್ರೀಯಾಗಿ ಸಿಗುತ್ತೆ!

Petrol Bunk: ಪೆಟ್ರೋಲಿಯಂ ಮತ್ತು ನ್ಯಾಚುರಲ್ ಗ್ಯಾಸ್ ರೆಗ್ಯುಲೇಟರಿ ಬೋರ್ಡ್ (ಪಿಎನ್‌ಜಿಆರ್‌ಬಿ) ಮತ್ತು ಇತರ ಸ್ಥಳೀಯ ಆಡಳಿತಗಳು ಇಂಧನ ಸ್ಟೇಷನ್‌ಗಳಿಗೆ ಹಲವಾರು ನಿಯಮಗಳನ್ನು ಹಾಕಿವೆ. ಪೆಟ್ರೋಲ್ ಬಂಕ್ ಗಳಲ್ಲಿ ಟಾಯ್ಲೆಟ್ ಸೇವೆ ಮಾತ್ರವಲ್ಲದೆ ಇನ್ನೂ ಕೆಲವು ಸೇವೆಗಳನ್ನು ಉಚಿತವಾಗಿ ನೀಡಬೇಕು. ನಮ್ಮ ದೇಶದ ಎಲ್ಲಾ ಪೆಟ್ರೋಲ್ ಸ್ಟೇಷನ್‌ಗಳಲ್ಲಿ ಲಭ್ಯವಿರುವ ಕೆಲವು ಉಚಿತ ಸೇವೆಗಳ ಬಗ್ಗೆ ತಿಳಿಯೋಣ. (New rule in petrol bunk)
ಪ್ರಯಾಣ ಮಾಡುವಾಗ ಬಾತ್‌ರೂಮ್ ಬಳಸಬೇಕೆಂದರೆ ಪೆಟ್ರೋಲ್ ಪಂಪಿಗೆ ಹೋಗಿ ಟಾಯ್ಲೆಟ್ ಬಳಸಿ. ಇದು ಒಬ್ಬ ವ್ಯಕ್ತಿಯ ಮೂಲಭೂತ ಅವಶ್ಯಕತೆ. ಈ ಅಗತ್ಯವನ್ನು ಪೆಟ್ರೋಲ್ ಪಂಪ್ ಮಾಲೀಕರು ನಿರಾಕರಿಸಲು ಸಾಧ್ಯವಿಲ್ಲ. ಟಾಯ್ಲೆಟ್ ಮತ್ತು ವಿಶ್ರಾಂತಿ ಕೊಠಡಿ ಕೊಳಕಾಗಿದ್ದರೆ ಕೂಡಾ ನೀವು ಅಧಿಕಾರಿಗಳಿಗೆ ದೂರು ನೀಡಬಹುದು.
ದೂರದ ಪ್ರಯಾಣದ ಸಂದರ್ಭ ದೇಹವು ಸಾಕಷ್ಟು ನೀರು ಬಯಸುವುದು ಮುಖ್ಯ. ಪೆಟ್ರೋಲ್ ಪಂಪ್‌ಗಳಲ್ಲಿ ನಿಮಗೆ ಉಚಿತವಾಗಿ ಶುದ್ಧ ಕುಡಿಯುವ ನೀರು ಬಳಸಲು ಹಕ್ಕಿದೆ.ಫಿಲ್ಟರ್ ಮಾಡಿದ ಶುದ್ಧ ಕುಡಿಯುವ ನೀರು ಕೊಡುವುದು ಬಂಕ್ ನವರ ಕರ್ತವ್ಯ. ಟೈರ್ ಗೆ ಉಚಿತ ಗಾಳಿ ಕೂಡಾ ಇಂತಹಾ ಒಂದು ಸವಲತ್ತು. ಅಗ್ನಿ ಸುರಕ್ಷತಾ ಉಪಕರಣ, ಫಸ್ಟ್ ಏಡ್ ಬಾಕ್ಸ್ ಕೂಡಾ ಇಂತಹಾ ಕಡ್ಡಾಯ ನೀಡಬೇಕಾದ ಸೌಲಭ್ಯಗಳಲ್ಲಿ ಒಂದು.
ಹಾಲು ಉಣಿಸುವ ತಾಯಿಗೆ ಮಗುವಿಗೆ ಹಾಲು ಕುಡಿಸಬೇಕೆಂದರೆ ಮಗುವಿಗೆ ಹಾಲುಣಿಸಲು ಬೇಕಾದ ಫೀಡಿಂಗ್ ರೂಮ್ ಇಂಧನ ಸ್ಟೇಷನ್‌ನಲ್ಲಿ ಇರಬೇಕು. ಒಂದು ಪೆಟ್ರೋಲ್ ಸ್ಟೇಷನ್‌ನ ಮಾಲೀಕರು ಅಂತಹ ಸೇವೆಗಳನ್ನು ನೀಡಲು ನಿರಾಕರಿಸಿದರೆ ಸ್ಥಳೀಯ ಅಧಿಕಾರಿಗಳಿಗೆ ಅಥವಾ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಲು ನಿಮಗೆ ಹಕ್ಕಿದೆ.
Comments are closed.