Chennai: ಬೀದಿ ನಾಯಿಗೆ ದೊಣ್ಣೆಯಿಂದ ಹೊಡೆದು ಕೊಂದ ವ್ಯಕ್ತಿ!

Chennai: ವ್ಯಕ್ತಿಯೋರ್ವ ಬೀದಿ ನಾಯಿಯನ್ನು ಕೋಲಿನಿಂದ ಹೊಡೆಯುತ್ತಿರುವ ದೃಶ್ಯ ವೈರಲ್ ಆಗಿದೆ. ಈ ವೀಡಿಯೋಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.
ಸರಕಾರೇತರ ಸಂಸ್ಥೆ ಪೀಪಲ್ ಫಾರ್ ಅನಿಮಲ್ಸ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ವೀಡಿಯೋವನ್ನು ಹಂಚಿಕೊಂಡಿದ್ದು, ವ್ಯಕ್ತಿಯನ್ನು 16 ಮದ್ರಾಸ್ ರೆಜಿಮೆಂಟ್ನ ಲ್ಯಾನ್ಸ್ ಹವಿಲ್ದಾರ್ ಎ ಪೈಡು ರಾಜು ಎಂದು ಗುರುತಿಸಲಾಗಿದೆ.
ಚೆನ್ನೈನ ಪಲ್ಲವರಂ ಸೇನಾ ಶಿಬಿರದೊಳಗೆ ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ. ನಾಯಿಗೆ ಹೊಡೆತ ಬಿದ್ದಿದ್ದರಿಂದ ಸಾವಿಗೀಡಾಗಿದೆ.
Comments are closed.