Tumakuru : ‘ಸಿಎಂ ಸಿದ್ದರಾಮಯ್ಯ ಎಷ್ಟು ಕೆಜಿ ಇದ್ದಾರೆ’ ಎಂದ ಸಿದ್ದಗಂಗಾ ಶ್ರೀ- ಪರಮೇಶ್ವರ್ ಹೇಳಿದ್ದೇನು ಗೊತ್ತಾ?

Tumakuru : ಸಿಎಂ ಸಿದ್ದರಾಮಯ್ಯ ಅವರಿಗೆ ಮಂಡಿ ನೋವು ಕಾಣಿಸಿಕೊಂಡು ಸುಮಾರು ಮೂರು ತಿಂಗಳುಗಳು ಆಗವೆ. ಈಗಲೂ ಕೂಡ ಸಿಎಂ ಚಿಕಿತ್ಸೆ ತೆಗೆದುಕೊಳ್ಳುತ್ತಲಿದ್ದಾರೆ. ಇದೀಗ ಸಿದ್ದರಾಮಯ್ಯ ಅವರ ಆರೋಗ್ಯದ ಕುರಿತು ಸಿದ್ದಗಂಗಾ ಶ್ರೀಗಳು ಗೃಹ ಸಚಿವ ಪರಮೇಶ್ವರ್ ಬಳಿ ವಿಚಾರಿಸಿದ್ದಾರೆ.
ತುಮಕೂರು ಸಿದ್ದಗಂಗಾ ಮಠಕ್ಕೆ ಗೃಹ ಸಚಿವ ಪರಮೇಶ್ವರ್ ಭೇಟಿ ನೀಡಿದ್ದರು. ಶ್ರೀಗಳ ಜತೆ ಆಪ್ತ ಸಮಾಲೋಚನೆ ನಡೆಸಿದ್ದರು. ಈ ವೇಳೆ ಪರಮೇಶ್ವರ್ ಬಳಿ ಶ್ರೀಗಳು ಸಿದ್ದರಾಮಯ್ಯ ಆರೋಗ್ಯ ಪರಿಸ್ಥಿತಿ ಬಗ್ಗೆ ವಿಚಾರಿಸಿದ್ದಾರೆ. ಇದೇ ವೇಳೆ ಸಿಎಂ 100 ಕೆಜಿ ತೂಕ ಇದ್ದಾರ ಎಂದು ಸಿದ್ದಲಿಂಗ ಸ್ವಾಮೀಜಿ ಕೇಳಿದ್ದಾರೆ.ಇದಕ್ಕೆ ಪ್ರತಿಯಾಗಿ ನಗುತ್ತಲೆ ಪರಮೇಶ್ವರ್ ತಲೆ ಅಲ್ಲಾಡಿಸಿದ್ದಾರೆ
ಅಲ್ಲದೆ ಪರಮೇಶ್ವರ್ ಬಳಿ ಸಿಎಂ ಗುಣಮುಖರಾಗಲು ಎಷ್ಟು ದಿವಸ ಬೇಕು ಎಂದು ಶ್ರೀ ಗಳು ಕೇಳಿದರು. ಇದಕ್ಕೆ ಉತ್ತರಿಸಿದ ಪರಂ , ಸಿಎಂ ಕಾಲಿಗೆ ಲೆಗಿಮೆಂಟ್ ಹಾಕಿದ್ದಾರೆ.ಪೂರ್ಣ ಗುಣವಾಗಲು ಮೂರು ನಾಲ್ಕು ತಿಂಗಳ ಬೇಕಾಗುತ್ತದೆ.ಒಳ್ಳೆ ಟ್ರೀಟ್ಮೆಂಟ್ ಸಿಕ್ಕಿದೆ ಎಂದು ಮಾಹಿತಿ ನೀಡಿದ್ದಾರೆ.
Comments are closed.