Davanagere: ಪತ್ನಿ ಸಾವಿನಿಂದ ನೋವು; ಇಬ್ಬರು ಮಕ್ಕಳನ್ನು ಕೊಂದು, ಪತಿ ಆತ್ಮಹತ್ಯೆ!

Share the Article

Davanagere: ಪತ್ನಿ ಸಾವಿನ ನೋವಿನಿಂದ ಪತಿಯೋರ್ವ ತನ್ನ ಇಬ್ಬರು ಮಕ್ಕಳನ್ನು ಕೊಂದು ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ದಾವಣಗೆರೆ ಎಸ್‌ಪಿಎಎಸ್‌ ನಗರದಲ್ಲಿ ನಡೆದಿದೆ.

ಸಿಂಧುಶ್ರೀ (4), ಶೀಜಯ್‌ (3) ಮಕ್ಕಳನ್ನು ಕೊಲೆ ಮಾಡಿ ತಂದೆ ಉದಯ್‌ (35) ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಉದಯ್‌ ಅವರ ಪತ್ನಿ ಕೆಲ ತಿಂಗಳ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದರು. ಪತ್ನಿ ಸಾವಿನ ನಂತರ ಪತಿ ಉದಯ್‌ ಖಿನ್ನತೆಗೊಳಗಾಗಿದ್ದ. ಇಂದು (ಎಪ್ರಿಲ್‌ 10) ಮಕ್ಕಳನ್ನು ಸಾಯಿಸಿ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ.

ರಕ್ತದಲ್ಲಿ ಐ ಲವ್‌ ಯು ಹೇಮಾ ಎಂದು ಪತ್ನಿಯ ಹೆಸರು ಗೋಡೆಯ ಮೇಲೆ ಬರೆಯಲಾಗಿದೆ. ಹೇಮಾ ಮತ್ತು ಉದಯ್‌ ಇಬ್ಬರು ಪ್ರೀತಿ ಮದುವೆಯಾಗಿದ್ದರು. ಕಳೆದ ಎಂಟು ತಿಂಗಳ ಹಿಂದೆ ಪತ್ನಿ ಹೇಮಾ ಹೃದಯಾಘಾತದಿಂದ ನಿಧನ ಹೊಂದಿದ್ದರು.

Comments are closed.